ಸಸ್ಯಶಾಸ್ತ್ರ

ಸಸ್ಯಶಾಸ್ತ್ರ ಅಧ್ಯಯನ ವಿಭಾಗವು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬೋಧನೆ ಹಾಗೂ ಸಂಶೋಧನೆಗೆ ಮೀಸಲಾಗಿರುವ ಒಂದು ಪ್ರಮುಖ ವಿಭಾಗವಾಗಿದೆ. ಈ ವಿಭಾಗವು ಸುಮಾರು 400 ಕ್ಕೂ ಹೆಚ್ಚು ಜಾತಿಯ ಸಸ್ಯಪ್ರಭೇದಗಳನ್ನೊಳಗೊಂಡ ಸುಸಜ್ಜಿತವಾದ ಸಸ್ಯ ಉದ್ಯಾನವನವನ್ನು ಹೊಂದಿದೆ. ಇದರ ಜೊತೆಗೆ ಸಸ್ಯ ಸಮೂಹದ ಪ್ರಮುಖ ಗುಂಪುಗಳನ್ನು ಪ್ರತಿನಿಧಿಸುವ ಸುಮಾರು 1000 ಕ್ಕೂ ಹೆಚ್ಚಿನ ಸಸ್ಯಮಾದರಿಗಳ ಸಂಗ್ರಹಾಲಯವನ್ನು ಹೊಂದಿದೆ ಈ ಸಂಗ್ರಹಾಲಯಕ್ಕೆ ಎನ್.ಐ.ವ್ಯಾವಿಲಾವ್ ಎಂಬ ಸಸ್ಯ ವಿಜ್ಞಾನಿಯ ಹೆಸರನ್ನು ಇಡಲಾಗಿದೆ. ಈ ವಿಭಾಗವು ಸುಮಾರು 3500 ಕ್ಕೂ ಹೆಚ್ಚು ಸಸ್ಯ ಪ್ರಭೇದಗಳ ಸಂಗ್ರಹಣ ಮಂದಿರವನ್ನು ಹೊಂದಿದೆ. ಇದು ನಮ್ಮ ವಿಭಾಗದ ಅತ್ಯುತ್ತಮ ಸ್ವತ್ತಾಗಿದೆ. ಇದರ ಸಂಗ್ರಹಣೆಯನ್ನು ಸಮೃಧ್ಧಗೊಳಿಸುವುದಕ್ಕಾಗಿ ಹಲವು ಸಂಶೋಧಕರು ವಿವಿಧ ಸಸ್ಯ ಪ್ರಭೇಧಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ. ಈ ಸಂಗ್ರಹಣಮಂದಿರವು ಸಸ್ಯಗಳ ಗುರುತಿಸುವಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿ ಸಸ್ಯಸಂಗ್ರಹಣೆಯು ಆಯಾ ಸಸ್ಯ ಪ್ರಭೇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಹೊಂದಿರುತ್ತದೆ. 

 

ಸಸ್ಯಶಾಸ್ತ್ರ ಅಧ್ಯಯನ ವಿಭಾಗವು ಸಸ್ಯ ಜೀವಶಾಸ್ತ್ರದ ವಿವಿಧ ಕೇತ್ರಗಳಲ್ಲಿ ಹಲವು ಸಂಶೋಧನಾ ಯೋಜನೆಗಳನ್ನು ಹೊಂದಿದೆ. ನಮ್ಮ ವಿಭಾಗದ ಅಧ್ಯಾಪಕ ವೃಂದದವರು ಸುಮಾರು 250 ಕ್ಕೂ ಹೆಚ್ಚು ಪಿ.ಹೆಚ್‍ಡಿ. ಸಂಶೋಧಕರುಗಳಿಗೆ ಮಾರ್ಗದರ್ಶನ ಮಾಡಿರುತ್ತಾರೆ. ಸುಮಾರು 25ಕ್ಕೂ ಹೆಚ್ಚು ಪಠ್ಯಪುಸ್ತಕಗಳನ್ನು ಬರೆದಿರುತ್ತಾರೆ ಸುಮಾರು 2,000 ಕ್ಕೂ ಹೆಚ್ಚು ಸಂಶೋಧನ ಪತ್ರಿಕೆಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿರುತ್ತಾರೆ. ಇದರ ಜೊತೆಗೆ ತಮ್ಮ ಸಂಶೋಧನ ವರದಿಗಳನ್ನು ಹಲವು ವಿಚಾರಸಂಕಿರಣ ಮತ್ತು ವಿಚಾರಗೋಷ್ಠಿಗಳಲ್ಲಿ ಮಂಡಿಸಿರುತ್ತಾರೆ. ನಮ್ಮ ವಿಭಾಗದಲ್ಲಿ, ಸಸ್ಯವರ್ಗೀಕರಣ, ಔಷಧೀಯ ಸಸ್ಯಗಳು, ಜೈವಿಕ ತಂತ್ರಜ್ಞಾನ, ಅಣುಜೀವ ವಿಜಾÐನ, ಅನ್ವಯಿಕ ಸಸ್ಯರೋಗಶಾಸ್ತ್ರ, ಸೂಕ್ಷ್ಮಣುಜೀವಶಾಸ್ತ್ರ ಮತ್ತು ಪರಿಸರ ವಿಜ್ಞಾನ ಎಂಬ ವಿಷಯಗಳನ್ನು ಬೋಧಿಸಲಾಗುತ್ತಿದೆ. ವಿಭಾಗದ ಅಧ್ಯಾಪಕರುಗಳು ಸಸ್ಯಶಾಸ್ತ್ರದ ವಿವಿಧ ಸಂಶೋಧನ ಕಾರ್ಯಗಳಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. ಸ್ನಾತಕೋತ್ತರ ಪದವಿಯ ಜೊತೆಗೆ 1 ವರ್ಷದ ಎಂ.ಫಿಲ್ ಪದವಿಯನ್ನು ಬೋಧಿಸಲಾಗುತ್ತಿದೆ. 

 

ವಿಭಾಗವು ಹಲವು ಸಂಶೋಧನಾ ಯೋಜನೆಗಳನ್ನು ಸರ್ಕಾರದ ವಿವಿಧ ಇಲಾಖೆಗಳಾದ, ಡಿ.ಎಸ್.ಟಿ, ಡಿ.ಎಸ್.ಟಿ-ಎಫ್.ಐ.ಎಸ್.ಟಿ, ಯು.ಜಿಸಿ, ಐ.ಸಿ.ಎ.ಆರ್, ಎಮ್.ಓ.ಇ ಮತ್ತು ಎಫ್, ಸಿ.ಎಸ್.ಬಿ, ಎ.ಐ.ಸಿ.ಟಿ.ಇ ಮತ್ತು ಐ.ಓ.ಇ-ಎಮ್.ಹೆಚ್.ಆರ್.ಡಿ ಗಳ ಪ್ರಾಯೋಜಕತ್ವದ ಮೂಲಕ ಪಡೆದುಕೊಳ್ಳಲಾಗಿದೆ. ವಿಭಾಗವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳೊಂದಿಗೆ ವಿವಿಧ ಸಂಶೋಧನ ಕಾರ್ಯಗಳ ಸಂಯೋಜಕತ್ವವನ್ನು ಮುಂದಿನ 20 ವರ್ಷಗಳವರೆಗೆ ಹೊಂದಿರುತ್ತದೆ.