ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರ

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರವು 2008ರಲ್ಲಿ ಪ್ರಾರಂಭವಾಗಿದೆ. ಇದು ಯುಜಿಸಿ ಪ್ರಾಯೋಜಿತ ಸಂಸ್ಥೆಯಾಗಿದೆ. ಈ ಸಂಸ್ಥೆಯ ಮೂಲ ಉದ್ದೇಶ ಸಾಮಾಜಿಕ ಹೊರಗುಳಿಯುವಿಕೆ, ತಾರತಮ್ಯ, ಮಹಿಳೆಯರು, ದಲಿತರು, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕುರಿತಾದ ಸಂಶೋಧನೆ, ವಿಚಾರಸಂಕಿರಣ ಮತ್ತು ಜನಸಾಮಾನ್ಯರಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿದೆ.
 
 
ಕೇಂದ್ರವು 2018 ರಲ್ಲಿ ದಶಮಾನೋತ್ಸವ ಸಮಾರಂಭವನ್ನು ಆಚರಿಸುತ್ತಿದೆ. ಅದಕ್ಕಾಗಿ ಕೇದ್ರವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚಿಂತನೆ ನೆಡೆಸುತ್ತಿದೆ. ಕೇಂದ್ರವು ಇದುವರೆಗೆ 27 ವಿಚಾರಸಂಕಿರಣ, 13 ಪ್ರಾಯೋಜಿತ ಸಂಶೋಧನಾ ಯೋಜನೆಗಳನ್ನು ಕೈಗೊಂಡಿದೆ ಮತ್ತು ಕೇಂದ್ರದ ಅಧ್ಯಾಪಕರು ಇದುವರೆಗೆ 320ಕ್ಕಿಂತ ಹೆಚ್ಚಿನ ಲೇಖನಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಕೇಂದ್ರವು ಇದುವರೆಗೆ ಸುಮಾರು ರೂ.94 ಲಕ್ಷಗಳನ್ನು ಸಂಶೋಧನೆ, ವಿಚಾರ ಸಂಕಿರಣ ಮತ್ತು ಇತರೆ ಶೈಕ್ಷಣಿಕ ಚಟುವಟಿಕೆಗಳಿಗೆಂದು ಸರ್ಕಾರದ ಐ.ಸಿ.ಎಸ್.ಎಸ್.ಆರ್, ಐ.ಸಿ.ಎಮ್.ಆರ್, ಐ.ಸಿ.ಎಚ್.ಆರ್, ನಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್, ಮೆಡಿಕಲ್ ಕೌನ್ಸಿಲ್‍ಆ¥sóï ಇಂಡಿಯಾ, ನಬಾರ್ಡ್, ಮಿನಿಷ್ಟ್ರಿ ಆಫ್ ಸ್ಟಾಟಸ್ಟಿಕ್ಸ್ ಆಂಡ್ ಪ್ರೋಗ್ರಾಂ ಇಂಪ್ಲಿಮೆಂಟೇಷನ್, ರಾಷ್ಟ್ರೀಯ ಮಹಿಳಾ ಅಯೋಗ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ, ಮಹಿಳಾ ಮತ್ತು ಮಕ್ಕಳ ಅಬಿವೃಧ್ಧಿ ಇಲಾಖೆ, ಕರ್ನಾಟಕ ಸರ್ಕಾರದಂತಹ ಸಂಸ್ಥೆಗಳಿಂದ ಧನ ಸಹಾಯ ಪಡೆದಿದೆ. ಕೇಂದ್ರವು 26 ಪುಸ್ತಕಗಳನ್ನು ಹೊರತಂದಿದೆ ಹಾಗೂ ಸಂಸ್ಥೆಯ ಅಧ್ಯಾಪಕರು ಇದುವರೆಗೆ 130ಕ್ಕೂ ಹೆಚ್ಚಿನ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಲೇಖನಗಳನ್ನು ಮಂಡಿಸಿದ್ದಾರೆ. ದಿನ ಪತ್ರಿಕೆಗಳಲ್ಲಿ ಸಹ ಲೇಖನಗಳನ್ನು ಪ್ರಕಟಿಸಿದ್ದಾರೆ. ಕೇಂದ್ರವು ನಿಯಮಿತವಾಗಿ ತನ್ನ ಸಂಶೋಧನಾ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸುತ್ತಿದೆ.