ಮೈಸೂರು ವಿಶ್ವವಿದ್ಯಾನಿಲಯವು ಜುಲೈ 27, 1916 ರಂದು ಸ್ಥಾಪನೆಯಾಯಿತು. ಇದು ಭಾರತ ದೇಶದ ಆರನೆಯ ಮತ್ತು ಕರ್ನಾಟಕ ರಾಜ್ಯದಲ್ಲಿ ಸ್ಥಾಪನೆಗೊಂಡ ಮೊದಲ ವಿಶ್ವವಿದ್ಯಾನಿಲಯ.  ಹಾಗೆಯೇ ಬ್ರಿಟಿಷರ ಭಾರತದ ಸರಹದ್ದಿನ ಹೊರಗೆ ಸ್ಥಾಪಿತವಾದ ದೇಶದ ಮೊದಲ ವಿಶ್ವವಿದ್ಯಾನಿಲಯ.  ಉದಾರವಾದಿ ಹಾಗೂ ದೂರದೃಷ್ಟಿಯುಳ್ಳ ಅಂದಿನ ಮಹಾರಾಜ ಸನ್ಮಾನ್ಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ (1884-1940) ಹಾಗೂ ಅಂದಿನ ದಿವಾನ ಶ್ರೀ. ಸರ್. ಎಂ. ವಿಶ್ವೇಶ್ವರಯ್ಯ(1860-1962)ನವರ ಪ್ರಯತ್ನದ ಫಲ ಇದು. 

2000ನೇ ಇಸವಿಯಲ್ಲಿ ಐದು ನಕ್ಷತ್ರಗಳ ನ್ಯಾಕ್ ಮಾನ್ಯತೆ ಪಡೆದ ಮೊದಲ ವಿಶ್ವವಿದ್ಯಾನಿಲಯ. 

 

ವಿಶ್ವವಿದ್ಯಾನಿಲಯವು ಕರ್ನಾಟಕದ ಸಾಂಸ್ಕೃತಿಕನಗರಿ ಮೈಸೂರಿನಲ್ಲಿದೆ. ಮೈಸೂರು ಒಡೆಯರ ಸಂಸ್ಥಾನದ ರಾಜಧಾನಿ. ಅರಮನೆಗಳ, ದೇವಸ್ಥಾನಗಳ ಮತ್ತು ಉದ್ಯಾನವನಗಳ ನಗರಿ. ಭವ್ಯವಾದ ಐತಿಹಾಸಿಕ ಸ್ಮಾರಕಗಳು ಮತ್ತು ಅನನ್ಯ ಶಿಲ್ಪಕಲೆಯ ಪ್ರವಾಸಿ ಕೇಂದ್ರವಾಗಿದ್ದು ರೇಷ್ಮೆ, ಶ್ರೀಗಂಧದ ಎಣ್ಣೆ, ದಂತ ಹಾಗೂ ಶ್ರೀಗಂಧದ ಕುಸುರಿ ಕಲೆಗಳಿಗೆ ಪ್ರಸಿದ್ಧವಾಗಿದೆ. ನಗರ ಹಿತಕರ ಹವಾಮಾನ ಹೊಂದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ 140 ಕಿ.ಮೀಗಳಷ್ಟು ದೂರವಿದ್ದು ರೈಲು, ರಸ್ತೆ ಮತ್ತು ವಾಯುಸಂಚಾರಗಳ ಮೂಲಕ ಸಂಪರ್ಕ ಹೊಂದಿದೆ.

 

ದೃಷ್ಟಿ-ಧ್ಯೇಯ

ಸಮಾಜದ ಸರ್ವ ಸಂಪನ್ಮೂಲವನ್ನು ಒಗ್ಗೂಡಿಸಿ, ವಿಶ್ವಮಟ್ಟದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಧ್ಯೇಯ ನಮ್ಮದು. ವಿವಿಧ ಜ್ಞಾನಶಿಸ್ತುಗಳಿಂದ ಕಲಿಕೆ ಮತ್ತು ಮಾನವ ಬಂಡವಾಳವನ್ನು ಬೆಳೆಸಿ, ನೈತಿಕ ಸ್ಥೈರ್ಯ ಹಾಗು ನಾಳಿನ ನಾಯಕರಾಗುವ ಸಾಮರ್ಥ್ಯವುಳ್ಳ ವ್ಯಕ್ತಿಗಳನ್ನು ರೂಪಿಸುವುದು ನಮ್ಮ ಗುರಿಯಾಗಿದೆ. ಕ್ಷಿಪ್ರವಾಗಿ ಬದಲಾಗುತ್ತಿರುವ ಜಾಗತಿಕ ಹಾಗೂ ಸ್ಥಳೀಯ ವಸ್ತುಸ್ಥಿತಿಗಳಿಂದ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಆಶಯವಾಗಿದೆ

 

ಧ್ಯೇಯ ಸಾಧನೆ

ಸಂಸ್ಥಾಪಕ ಪೂರ್ವಸೂರಿಗಳಿಂದ ದತ್ತವಾದ ಮಹತ್ತರ ಬಳುವಳಿಯನ್ನು ಬಳಸಿ, ಬೆಳೆಸಿ, ವಿವಿಧ ಜ್ಞಾನಶಿಸ್ತುಗಳ ನಡುವೆ ವೈಚಾರಿಕ ಸಂವಾದಗಳನ್ನು ಸೃಷ್ಟಿಸಿ, ಪೂರಕ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವುದು. ಉತ್ತಮ ರೀತಿಯ ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳ ಮೂಲಕ ಹೊಸ ಅರಿವನ್ನು ಮೂಡಿಸಿ ಜ್ಞಾನವನ್ನು ಶೇಖರಿಸುವುದು. ನಾಯಕತ್ವ ಗುಣ, ಉತ್ತಮ ದೃಷ್ಟಿ-ಧ್ಯೇಯಗಳನ್ನು ಹೊಂದಿ, ಸಮಾಜಕ್ಕೆ ಮಾರ್ಗದರ್ಶಕರಾಗಬಲ್ಲ ವಿದ್ಯಾರ್ಥಿ ಸಮುದಾಯವನ್ನು ರೂಪಿಸುವುದು ನಮ್ಮ ಸಾಧನಾ ಮಾರ್ಗವಾಗಿದೆ.

 

ಮೌಲ್ಯಗಳು

        Modesty (ವಿನಮ್ರತಾ)                         : ಅಹಂಕಾರ ತ್ಯಜಿಸುವಿಕೆ

                                                                To be free from vanity

 

        Originality (ನವೀನತಾ)                       : ಸೃಜನಶೀಲ ಚಿಂತನೆಯಲ್ಲಿ ತೊಡಗುವಿಕೆ

                                                                To cultivate innovative thinking

 

        Understanding (ಅವಗಮನಂ)              : ಜನರ ಭಾವನೆಗಳ ಆದರಿಸುವಿಕೆ

                                                                 To value people and their feelings

 

        Leadership (ನಾಯಕತ್ವಂ)                   : ಧನಾತ್ಮಕ ಬದಲಾವಣೆ ತರುವಿಕೆ

                                                                To make a positive difference

 

       Yearning (ಅಭಿಲಾಷಃ)                         : ಜ್ಞಾನದಾಹ ಹೊಂದುವಿಕೆ

                                                                To acquire knowledge passionately

 

       Accountability (ಉತ್ತರದಾಯಿತ್ವಂ)         : ಪರಮೋಚ್ಛ ನೈತಿಕತೆಯ ಕಾಯ್ದುಕೊಳ್ಳುವಿಕೆ

                                                                To maintain highest standards of integrity

ಗೋಲು

ಈ ದೂರದೃಷ್ಠಿಯನ್ನು 2025ರ ಹೊತ್ತಿಗೆ ಸಾಕಾರಗೊಳಿಸುವುದು ನಮ್ಮ ಗೋಲಾಗಿದೆ. ಮೂಲಭೂತವಾಗಿ ನವೀನ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು ಕಾಲಕ್ಕನುಗುಣವಾಗಿ  ಉತ್ತಮಪಡಿಸುವುದು ನಮ್ಮ ಕಾರ್ಯತಂತ್ರವಾಗಿದೆ ಇದರಿಂದ ನಾವು ಸಮಯಕ್ಕೆ ಸರಿಯಾಗಿ ಹಾಗೂ ಸರಿ ಹಾದಿಯನ್ನಾರಿಸಿಕೊಳ್ಳಬಹುದು. ಪಠ್ಯಕ್ರಮಕ್ಕನುಗುಣವಾಗಿ ಹಾಗೂ ಅನುಭವದ ಕಾರ್ಯಕ್ರಮಗಳ ಮೂಲಕ ವಿಶ್ವವಿದ್ಯಾನಿಲಯದ ಒಳ-ಹೊರಗೆ ಭಾಗವಹಿಸುವ ಅಧ್ಯಾಪಕ ಪರಿಸರವನ್ನು ಒಳಗೊಂಡಿರುವುದು ನಮ್ಮ ಬದ್ಧತೆಯಾಗಿದೆ. ಅದರಿಂದ ಅವರು ಜಾಗತೀಕರಣದ ವಿಶಾಲ ಸ್ಪರ್ಧೆಯಲ್ಲಿ ಸಾಧನೆಯೊಂದಿಗೆ ತಮ್ಮ ಜ್ಞಾನವನ್ನು ಹಂಚುವ ಹಾಗೂ ತಮ್ಮ ವೃತ್ತಿಯಲ್ಲಿ ಉತೃಷ್ಠತೆಯನ್ನು ಸಾಧಿಸಬಹುದು.

 

ಗುರಿ

ವಿಶ್ವವಿದ್ಯಾನಿಲಯದ ಗುರಿಯು ಅದರ ಲಾಂಛನದಲ್ಲಿ ಕೆತ್ತಲಾಗಿದೆ (ಎರಡೂ ಕಡೆ ಆವರಿಸಿರುವ “ಗಂಢಭೇರುಂಡ” ಪಕ್ಷಿಯ ಚಿತ್ರ ಆನೆ ಮತ್ತು ಸಿಂಹಕ್ಕಿಂತಲೂ ಬಲಿಷ್ಠವೆಂದು ನಂಬಲಾಗಿದ್ದು ನ್ಯಾಯವನ್ನು ಎತ್ತಿಹಿಡಿಯುತ್ತದೆ) “ಜ್ಞಾನಕ್ಕಿಂತ ಮಿಗಿಲಾದುದಿಲ್ಲ” (“ನಹಿ ಜ್ಞಾನೇನ ಸದೃಶಂ” ಎಂಬ ಸಾಲನ್ನು ಭಗವದ್ಗೀತೆಯಿಂದ ತೆಗೆದುಕೊಳ್ಳಲಾಗಿದೆ) ಹಾಗೂ “ಸತ್ಯವನ್ನು ಎತ್ತಿಹಿಡಿಯುವುದು” (ಸತ್ಯಮೇವೋದ್ಧಾರಹಮ್ಯಹಂ). ಹಾಗಾಗಿ ಸತ್ಯಕ್ಕೆ ಅಂಟಿಕೊಳ್ಳುವುದೇ ಉನ್ನತವಾದದ್ದು ಆದರ್ಶಪ್ರಾಯವಾಗಿದೆ. ಇದನ್ನು ವಿಶ್ವವಿದ್ಯಾನಿಲಯವು ತನ್ನ ಎಲ್ಲಾ ಅಸ್ತಿತ್ವ ಹಾಗೂ ಯಶಸ್ಸಿನ ಹಾದಿಯ ಮೂಲಕ ಪಡೆದಿದೆ. 

 

ವಿ.ವಿ ಕ್ಯಾಂಪಸ್ (ಆವರಣ)

“ಮುಖ್ಯ ಕ್ಯಾಂಪಸ್ ಅಥವಾ ಪ್ರದೇಶವು “ಮಾನಸಗಂಗೋತ್ರಿ” “ಮನಸ್ಸಿನ ನಿರಂತರ ವಸಂತ” ಎಂಬುದು ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ವಿಜೇತ  ಕುವೆಂಪು ಅವರಿಂದ ನಾಮಾಂಕಿತವಾಯಿತು. 739 ಎಕರೆ ವಿಸ್ತೀರ್ಣವುಳ್ಳ ಇದು ವಿಸ್ತಾರವಾದ 261 ಎಕರೆಯುಳ್ಳ “ಕುಕ್ಕರಹಳ್ಳಿಕೆರೆ” ಯಿಂದ ಸುತ್ತುವರಿದಿದೆ. ಮುಖ್ಯ ಕ್ಯಾಂಪಸ್‍ಗೆ ಹೆಚ್ಚುವರಿಯಾಗಿ 3 ಕ್ಯಾಂಪಸ್‍ಗಳಿದ್ದು ಒಂದು ಮಂಡ್ಯದ ಹತ್ತಿರ ತೂಬಿನಕೆರೆಯಲ್ಲಿದೆ, ಈ ಕ್ಯಾಂಪಸ್ ಅನ್ನು ಶ್ರೀ. ಸರ್.ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ ಎಂದು ಕರೆಯುತ್ತಾರೆ. ಇದು ಮೈಸೂರು-ಬೆಂಗಳೂರು ರಸ್ತೆಯಲ್ಲಿ ಮಂಡ್ಯದಿಂದ ಸುಮಾರು 8 ಕಿ.ಮೀ. ದೂರದಲ್ಲಿದೆ. ಮತ್ತೊಂದು ಸ್ನಾತಕೋತ್ತರ ಕೇಂದ್ರ “ಹೇಮಗಂಗೋತ್ರಿ” ಹಾಸನದಲ್ಲಿದೆ. ಇದು ಹಾಸನದಿಂದ 10 ಕಿ.ಮೀ ದೂರದ ಕೆಂಚಟ್ಟಹಳ್ಳಿ ಗ್ರಾಮದ ಹತ್ತಿರವಿದೆ. ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವು ಚಾಮರಾಜನಗರ ಜಿಲ್ಲೆಯಲ್ಲಿದೆ.

85 ಸ್ನಾತಕೋತ್ತರ ವಿಭಾಗಗಳು 150ಕ್ಕೂ ಹೆಚ್ಚು ಸ್ನಾತಕೋತ್ತರ ವಿಷಯಗಳನ್ನು ಒಳಗೊಂಡಿದ್ದು 1,20,000ಕ್ಕೂ ಹೆಚ್ಚು ಪದವಿ, ಸ್ನಾತಕ ಪದವಿ, ಎಂ.ಫಿಲ್ ವಿದ್ಯಾರ್ಥಿಗಳಿದ್ದಾರೆ. 39 ಮಾನ್ಯತೆಯುಳ್ಳ ಸಂಶೋಧನಾ ಕೇಂದ್ರಗಳು, 138 ಹೊರಗುತ್ತಿಗೆ / ಸಂಶೋಧನಾ ಕೇಂದ್ರಗಳು, 8 ತರಬೇತಿ ಕೇಂದ್ರಗಳು, 23 ವಿಶೇಷ ಕಾರ್ಯಕ್ರಮಗಳು ರಾಷ್ಟ್ರೀಯ ಸಹಯೋಗದಲ್ಲಿ ನಡೆದಿದೆ. ಮುಂದುವರೆದು 11 ವಿಭಾಗಗಳು ರಾಷ್ಟ್ರೀಯ ಸಂಶೋಧನಾ ಸೌಲಭ್ಯವನ್ನು ಒಳಗೊಂಡಿದೆ. 15 ಪೀಠಗಳು, 13 DST-FIST, UGC-SAP ಅನುದಾನಿತ ಘಟಕಗಳು. 50 ದೇಶಗಳಿಂದ ಬಹು ಸಂಖ್ಯೆಯ ವಿದೇಶಿ ವಿದ್ಯಾರ್ಥಿಗಳು ವಿ.ವಿಯಲ್ಲಿ ವಿವಿಧ ವಿಷಯಗಳನ್ನು ಕಲಿಯುತ್ತಿದ್ದು ಅಂತರಾಷ್ಟ್ರೀಯ ಸಾಮರ್ಥ್ಯವನ್ನು ಪ್ರತಿ ಬಿಂಬಿಸುತ್ತದೆ.

 

ಪ್ರಮುಖ ಮೈಲಿಗಲ್ಲುಗಳು:

  • NIRF Ranking 2023 by MHRD, Govt. of India : University of Mysore got 44th position in India. 

  • Hansa- The WEEK National Ranking 2017 ರವರು ಕೈಗೊಂಡ ಭಾರತದಲ್ಲಿನ ಉತ್ತಮ ವಿಶ್ವವಿದ್ಯಾನಿಲಯಗಳು ಸಮೀಕ್ಷೆಯಲ್ಲಿ 9 ನೇ (ರಾಜ್ಯ ವಿಶ್ವವಿದ್ಯಾಲಯಗಳು) ಮತ್ತು 15 ನೇ (ಭಾರತ ವಿಶ್ವವಿದ್ಯಾನಿಲಯಗಳು) ಸ್ಥಾನ ಪಡೆದಿದೆ.
  • ಮೈಸೂರು ವಿಶ್ವವಿದ್ಯಾನಿಲಯವು 2000ನೇ ಇಸವಿಯಲ್ಲಿ ನ್ಯಾಕ್ ನಿಂದ  “ಐದು ನಕ್ಷತ್ರ “ಶ್ರೇಣಿ ಮಾನ್ಯತೆ ಪಡೆದ ಕರ್ನಾಟಕ ರಾಜ್ಯದ ಮೊದಲ ವಿಶ್ವವಿದ್ಯಾನಿಲಯ.
  • ನ್ಯಾಕ್  ಮಾನ್ಯತೆಯ ಎರಡನೇ ಆವೃತ್ತಿ 2006ರಲ್ಲಿ  A+  ಶ್ರೇಣಿ ಪಡೆದಿದೆ.
  • ಮೂರನೇ-ಆವೃತ್ತಿಯಲ್ಲಿ  4-ಪಾಯಿಂಟ್ ಸ್ಕೇಲ್ನಲ್ಲಿ 3.47 ಅಂಕದೊಂದಿಗೆ ಮತ್ತೊಮ್ಮೆ A  ಶ್ರೇಣಿ ನ್ಯಾಕ್ ಮಾನ್ಯತೆ  ಪಡೆದಿದೆ, 4ನೇ ಆವೃತ್ತಿಯ ನ್ಯಾಕ್ ಮಾನ್ಯತೆಯಲ್ಲಿ A ಶ್ರೇಣಿಯನ್ನು ಪಡೆದುಕೊಂಡಿದೆ.
  • 2008 ರಲ್ಲಿ ಭಾರತ ಸರ್ಕಾರವು ವಿಶ್ವವಿದ್ಯಾನಿಲಯವನ್ನು “ಉತ್ಕೃಷ್ಟತೆಯ ಸಂಸ್ಥೆ” ಎಂದು ಗುರುತಿಸಿ ರೂ 100 ಕೋಟಿ ಅನುದಾನ ನೀಡಿದೆ.
  • 2009 ರಲ್ಲಿ ಭಾರತ ಸರ್ಕಾರವು ವಿಶ್ವವಿದ್ಯಾನಿಲಯವನ್ನು “ಸಾಮರ್ಥ್ಯವರ್ಧಿತ  ಉತ್ಕೃಷ್ಟ ಜ್ಞಾನ ಸಂಸ್ಥೆ” ಎಂದು ಗುರುತಿಸಿ ರೂ 50 ಕೋಟಿ ಅನುದಾನ ನೀಡಿದೆ.
  • 2016ರಲ್ಲಿ ಸರ್ಕಾರವು ವಿಶ್ವವಿದ್ಯಾನಿಲಯವನ್ನು Centre of Excellence in Potential for Excellence in a Particular Area (CPEPA) ಎಂದು ಗುರುತಿಸಿ ರೂ 9.5 ಕೋಟಿ ಅನುದಾನ ನೀಡಿದೆ.
  • ವೈಜ್ಞಾನಿಕ ಪ್ರಕಟಣೆಗಳಲ್ಲಿ ಅಗ್ರ 20 ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ ಮತ್ತು PURSE ಯೋಜನೆಯಡಿಯಲ್ಲಿ ರೂ. 9.00 ಕೋಟಿ ನೀಡಲಾಯಿತು ಮತ್ತು 2016ರಲ್ಲಿ 2 ನೇ ಹಂತಕ್ಕೆ ನವೀಕರಿಸಿ ರೂ. 8.5 ಕೋಟಿ ನೀಡಲಾಯಿತು.
  • 2009ರಲ್ಲಿ ಕರ್ನಾಟಕ ಸರ್ಕಾರವು ವಿ.ವಿಯನ್ನು ‘Innovation University” ಎಂದು ಗುರುತಿಸಿತು.
  •  ಒಟ್ಟಾರೆ H- ಸೂಚ್ಯಂಕ (ವೆಬ್ ಆಫ್ ಸೈನ್ಸ್) ಪ್ರಕಟವಾದ  ಸಂಶೋಧನೆಗಳು 42 ಜೊತೆಗೆ 3609 ಪ್ರಕಟಣೆಗಳು. ವಿಶ್ವವಿದ್ಯಾನಿಲಯದ ಕೆಲವು ಸಿಬ್ಬಂದಿ ಸದಸ್ಯರು 18 ಮತ್ತು ಅದಕ್ಕಿಂತ ಹೆಚ್ಚಿನ ಸೂಚ್ಯಂಕವನ್ನು ಹೊಂದಿದ್ದಾರೆ.

 

ಶತಮಾನೋತ್ಸವ ಆವರಣೆ 
ಮೈಸೂರು ವಿಶ್ವವಿದ್ಯಾನಿಲಯವು ತನ್ನ ಶತಮಾನೋತ್ಸವವನ್ನು 2015-16ರಲ್ಲಿ ಆಚರಿಸಿಕೊಂಡಿತು. ಜುಲೈ 27, 2015 ರಂದು ಭಾರತದ ಆಗಿನ ಗೌರವಾನ್ವಿತ ರಾಷ್ಟ್ರಪತಿ ಶ್ರೀ.ಪ್ರಣಬ್ ಮುಖರ್ಜಿ ಅವರು ವರ್ಷವಿಡೀ ಆಚರಣೆಗಳನ್ನು ಉದ್ಘಾಟಿಸಿದರು. ಆಚರಣೆಯ ಅಂಗವಾಗಿ, 8 ನೊಬೆಲ್ ಪ್ರಶಸ್ತಿ ವಿಜೇತರು ವಿಶೇಷ ಉಪನ್ಯಾಸಗಳನ್ನು ನೀಡಿದರು. ವರ್ಷವಿಡೀ ವಿವಿಧ ವಿಭಾಗಗಳಲ್ಲಿ ಶ್ರೇಷ್ಠ ವಿದ್ವಾಂಸರನ್ನು ಆಹ್ವಾನಿಸುವ ಮುಖಾಂತರ ವಿಚಾರಗೋಷ್ಠಿಗಳು ಮತ್ತು ಕಾರ್ಯಾಗಾರಗಳು ನಡೆದವು. ಜುಲೈ 22, 2016 ರಂದು ಭಾರತದ ಗೌರವಾನ್ವಿತ  ಉಪರಾಷ್ಟ್ರಪತಿ ಶ್ರೀ ಹಮೀದ್ ಅನ್ಸಾರಿ ಅವರು ಸಮಾರೋಪ ಸಮಾರಂಭದ  ಭಾಷಣ ಮಾಡಿದರು.

 

103ನೇ ಭಾರತೀಯ ವಿಜ್ಞಾನ ಕಾಂಗ್ರೆಸ್

ಭಾರತೀಯ ವಿಜ್ಞಾನ ಕಾಂಗ್ರೆಸ್  ಸಹಯೋಗದೊಂದಿಗೆ ಮೈಸೂರು ವಿಶ್ವವಿದ್ಯಾನಿಲಯವು 103 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ಅನ್ನು ಜನವರಿ 03, 2016ರಲ್ಲಿ ಯಶಸ್ವಿಯಾಗಿ ಆಯೋಜಿಸಿದೆ. 

ಈ ಕಾಂಗ್ರೆಸ್‍ನ ಬಹುಮುಖ್ಯ ತತ್ವವೆಂದರೆ “ಭಾರತದಲ್ಲಿ ದೇಶೀಯ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಾಂತ್ರಿಕತೆ” ಇದು ಜನವರಿ 3 2016ರಲ್ಲಿ ಭಾರತದ ಘನತೆವೆತ್ತ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡಿತು.

ಸಮಾರಂಭಕ್ಕೆ ಎಲ್ಲಾ ಕಡೆಯಿಂದಲೂ 18,528 ಅಭ್ಯರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿದ್ದರು. ಯು.ಎಸ್.ಎ, ಕೆನಡ, ಯು.ಕೆ. ಆಸ್ಟ್ರೇಲಿಯಾ, ಜಪಾನ್, ಕೊರಿಯಾ, ಫ್ರಾನ್ಸ್, ಇತ್ಯಾದಿ ದೇಶಗಳಿಂದ 600 ಉನ್ನತ ಶ್ರೇಣಿಯ ವ್ಯಕ್ತಿಗಳು ಈ ಕಾಂಗ್ರೆಸ್‍ನಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ನೊಬೆಲ್ ಪ್ರಶಸ್ತಿ ವಿಜೇತರು, ಒಬ್ಬರು ಕ್ಷೇತ್ರ ಪದಕ ವಿಜೇತ, ಒಬ್ಬರು ಭಾರತ ರತ್ನ ಮತ್ತು (eminent) ವಿಜ್ಞಾನಿಗಳು ಉಪನ್ಯಾಸ ನೀಡಿದರು. ಒಟ್ಟು 28 ವಿಚಾರ ಸಂಕಿರಣ, 18 ತಾಂತ್ರಿಕ ಉಪನ್ಯಾಸಗಳು ಜೊತೆಗೆ ಮಹಿಳಾ ವಿಜ್ಞಾನ ಕಾಂಗ್ರೆಸ್, ವಿಜ್ಞಾನ ಸಂವಹನಕಾರರ ಸಭೆ ಮತ್ತು ಮಕ್ಕಳ ವಿಜ್ಞಾನ ಕಾಂಗ್ರೆಸ್ ಕೂಡ ಆಯೋಜಿಸಲಾಗಿತ್ತು.

 

 

40ನೇ ಭಾರತೀಯ ಸಮಾಜ ವಿಜ್ಞಾನ ಕಾಂಗ್ರೆಸ್-2016

 ಭಾರತೀಯ ಸಮಾಜ ವಿಜ್ಞಾನ ಅಕಾಡೆಮಿ (IASS) ಮೈಸೂರು ವಿಶ್ವವಿದ್ಯಾನಿಲಯದ ಸಹಭಾಗಿತ್ವದೊಂದಿಗೆ 2016ರ ಡಿಸೆಂಬರ್ 19-23ರವರೆಗೆ “ಭಾರತದಲ್ಲಿ ಜನರ ಆರೋಗ್ಯ ಮತ್ತು ಜೀವನ ಗುಣಮಟ್ಟ ಸುಧಾರಣೆ” ಎಂಬ ವಿಷಯದ ಮೇಲೆ ಭಾರತೀಯ ಸಮಾಜ ವಿಜ್ಞಾನ ಕಾಂಗ್ರೆಸ್ ಆಯೋಜನೆಗೊಂಡಿತು. ಪ್ರೊ. ಬಿ.ಎಂ. ಹೆಗಡೆಯವರು ಈ ಕಾಂಗ್ರೆಸ್ ಅನ್ನು ಉದ್ಘಾಟಿಸಿದರು. 28 ಸಂಶೋಧನಾ ಕೇಂದ್ರದ ಎಲ್ಲಾ ಅಧ್ಯಕ್ಷರು ಮತ್ತು ಪ್ರತಿನಿಧಿಗಳು ಈ ಬಹುದೊಡ್ಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 5000ಕ್ಕೂ ಹೆಚ್ಚು ಸಮಾಜ ವಿಜ್ಞಾನಿಗಳು ಮತ್ತು ಪ್ರತಿನಿಧಿಗಳು ಈ ಕಾಂಗ್ರೆಸ್‍ನಲ್ಲಿ ಭಾಗವಹಿಸಿದ್ದರು.

 

ಉತ್ಕೃಷ್ಟತೆಯ ಸಂಸ್ಥೆ

ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಜೈವಿಕ ವೈವಿಧ್ಯತೆ, ಜೈವಿಕ ಅನ್ವೇಷಣೆ ಮತ್ತು ಸಮರ್ಥನೀಯ ಅಭಿವೃದ್ಧಿಯ ವಿಷಯಗಳಲ್ಲಿನ ಸಂಶೋಧನೆಗಾಗಿ  ಮೈಸೂರು ವಿ.ವಿಯನ್ನು  ಉತ್ಕೃಷ್ಟತೆಯ ಸಂಸ್ಥೆಯೆಂದು ಗುರುತಿಸಿ ರೂ.100 ಕೋಟಿ ಅನುದಾನ ನೀಡಿದೆ. ಈ ಅನುದಾನದಲ್ಲಿ ದುಬಾರಿ/ಉತ್ಕೃಷ್ಟ ಸಂಶೋಧನೆಗೆ ಪೂರಕ   NMR, NGS, LCMS, XRD, Imaging and Cell culture ಉಪಕರಣಗಳನ್ನು ಖರೀದಿಸಿ ಅಳವಡಿಸಲಾಗಿದೆ. 

 

ಶೈಕ್ಷಣಿಕ ಕಾರ್ಯಕ್ರಮಗಳು

ಮೈಸೂರು ವಿಶ್ವವಿದ್ಯಾನಿಲಯವು ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮ, ಸರ್ಟಿಫಿಕೇಟ್(ಪ್ರಮಾಣಪತ್ರ), ಪಿ.ಹೆಚ್.ಡಿ ಪದವಿಗಳನ್ನು ನೀಡುತ್ತಿದೆ. ಅವುಗಳೆಂದರೇ: 1. ಕಲಾ. ಮಾನವಿಕ ಮತ್ತು ಸಮಾಜ ವಿಜ್ಞಾನ 2.ವಾಣಿಜ್ಯ ಮತ್ತು ನಿರ್ವಹಣೆ 3. ಶಿಕ್ಷಣ 4. ಕಾನೂನು 5. ವಿಜ್ಞಾನ ಮತ್ತು ತಂತ್ರಜ್ಞಾನ ವಿಷಗಳನ್ನು ಭೋಧಿಸುತ್ತಿದೆ.

ವಿಶ್ವವಿದ್ಯಾನಿಲಯದ ಶಕ್ತಿ, ಉತ್ತಮ ಗುಣಮಟ್ಟದ ಭೋಧನೆ, ಅನುಭವಿ ಅಧ್ಯಾಪಕವರ್ಗ ಮತ್ತು ಸಂಶೋಧನೆ.  ಶಿಕ್ಷಣ, ಲಲಿತ ಕಲೆಗಳು, ಭಾಷೆ, ಕಾನೂನು, ದೈಹಿಕ ಶಿಕ್ಷಣ, ನೈಜ ಮತ್ತು ಅನ್ವಯಿಕ ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಅಂತಾರಾಷ್ಟ್ರೀಯ ಗುಣಮಟ್ಟದ ಭೋಧನೆ ಮತ್ತು ಸಂಶೋಧನೆಯಲ್ಲಿ ಸಮರ್ಥನೀಯತೆಗೆ ಹೆಸರುವಾಸಿಯಾಗಿದೆ. ರಾಷ್ಟ್ರೀಯ ಮತ್ತು  ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಹಣಕಾಸು ಏಜೆನ್ಸಿಗಳಿಂದ ವಿ.ವಿ ವಿಭಾಗಗಳಿಗೆ ಸಂಶೋಧನಾ ಯೋಜನೆಗಳಿಗಾಗಿ ಕೋಟಿ, ಕೋಟಿ ರೂಪಾಯಿಗಳ ಅನುದಾನ ಸಿಗುತ್ತಿದೆ.

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ (DST) ವಿಭಾಗವು FIST ಕಾರ್ಯಕ್ರಮದಡಿಯಲ್ಲಿ ಸೂಕ್ಷ್ಮಜೀವವಿಜ್ಞಾನ, ಭೌತಶಾಸ್ತ್ರ, ರೇಷ್ಮೆಕೃಷಿವಿಜ್ಞಾನ, ಮತ್ತು ಸಂಖ್ಯಾಶಾಸ್ತ್ರ ವಿಭಾಗಗಳನ್ನು ಗುರುತಿಸಿದೆ.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (UGC) (SAP)ವಿಶೇಷ ನೆರವು ಕಾರ್ಯಕ್ರಮದಡಯಲ್ಲಿ ಜೀವ ರಸಾಯನಶಾಸ್ತ್ರ, ಜೈವಿ ಕತಂತ್ರಜ್ಞಾನ, ಭೂ ವಿಜ್ಞಾನ, ಆಹಾರ ವಿಜ್ಞಾನ ಮತ್ತು ಪೋಷಣೆ, ಮಾಧ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಗಣಿತ, ಸಂಖ್ಯಾಶಾಸ್ತ್ರ, ಪ್ರಾಣಿಶಾಸ್ತ್ರ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ರಾಜ್ಯಶಾಸ್ತ್ರ ವಿಭಾಗಗಳನ್ನು ಗುರುತಿಸಿದೆ.

Flexible Choice-Based Credit System with Continuous Assessment Grading Pattern (CBCS-CAGP)

 

2017-18ನೇ ಸಾಲಿಗೆ ಯುಜಿಸಿಯ ನಿರ್ದೇಶನದ ಮೇರೆಗೆ Flexible (CBCS-CAGP) ಸ್ಕೀಂ ಅನ್ನು  ಕೆಲವು ವಿಭಾಗಗಳು ಅಳವಡಿಸಿಕೊಂಡಿವೆ.

 

ಸಾಮರ್ಥ್ಯವರ್ಧಿತ ಉತೃಷ್ಟ ಜ್ಞಾನ ಕೇಂದ್ರ

 2012ರಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ವಿ.ವಿಯನ್ನು ಸಾಮರ್ಥ್ಯವರ್ಧಿತ  ಉತ್ಕೃಷ್ಟ ಜ್ಞಾನ ಸಂಸ್ಥೆ ಎಂದು ಪರಿಗಣಿಸಿ ಐದು ವರ್ಷಗಳ ಅವಧಿಗೆ ರೂ. 50 ಕೋಟಿಗಳ ಅನುದಾನ ನೀಡಿದೆ ಹಾಗೂ ಮತ್ತೊಂದು ವರ್ಷವನ್ನು ವಿಸ್ತರಿಸಿದೆ. ಈ ಯೋಜನೆಯು ಪ್ರಮುಖವಾಗಿ ಎರಡು ವಿಷಯಗಳನ್ನು ಒಳಗೊಂಡಿದೆ: Focused Area – I: Processing, Characterization & Applications of Advanced Functional Materials, Focused Area – II: Media and Social Development – A Case study of Karnataka. ಈ ಯೋಜನೆ ಮುಖಾಂತರ ಕೆಲವು ಸೌಲಭ್ಯಗಳನ್ನು ಒದಗಿಸಲಾಗಿದೆ  - High Performance Computing Environment (HPC), Adoption of Green Technology in the University Campus, Centre for Education of Visually Challenged –Drushtee, Multimedia Learning Resource Creation Centre (MLRCC), Earn While You Learn Scheme, Workshops, Conferences and Seminars, Centre for Proficiency Development, Upgradation of Printing and Publication Units, Books and Journals, Sports and Games, Strengthening of Department Laboratories and Hostels and E-governance.

 

ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ (ಸಿಸ್ಟ್)

ಮೈಸೂರು ವಿಶ್ವವಿದ್ಯಾನಿಲಯವು ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ (ಸಿಸ್ಟ್) ಮುಖಾಂತರ ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನ ಶಿಕ್ಷಣವನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ಈ ಕೇಂದ್ರವು ಭವ್ಯವಾದ ಸೆನೆಟ್‍ಭವನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕೇಂದ್ರವು ISO 9001-2000 ಪ್ರಮಾಣ ಪತ್ರ ಪಡೆದ ಕೇಂದ್ರವಾಗಿದೆ. ಈ ಕೇಂದ್ರವು ಹಲವಾರು ಸ್ನಾತಕೋತ್ತರ, ಡಿಪ್ಲಮೋ, ಸ್ನಾತಕೋತ್ತರ  ಡಿಪ್ಲಮೋ ಕೋರ್ಸ್‍ಗಳನ್ನು ನಡೆಸುತ್ತಿದ್ದು ಈ ಎಲ್ಲಾ  ಕೋರ್ಸ್‍ಗಳು ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಹಲವು ಪದವಿಗಳನ್ನು ಒಳಗೊಂಡಿರುತ್ತದೆ.

 

ಶೈಕ್ಷಣಿಕ ಬಹು- ಮಾಧ್ಯಮ ಸಂಶೋಧನಾ ಕೇಂದ್ರ 

 ಶೈಕ್ಷಣಿಕ ಬಹು- ಮಾಧ್ಯಮ ಸಂಶೋಧನಾ ಕೇಂದ್ರ (ಇಎಂಎಂಆರ್‍ಸಿ) 1996ರಲ್ಲಿ ಶ್ರವಣ-ದೃಶ್ಯ ಸಂಶೋಧನಾ ಕೇಂದ್ರ(ಎವಿಆರ್‍ಸಿ) ಹೆಸರಿನಲ್ಲಿ ಸ್ಥಾಪನೆಯಾಯಿತು. ಆಗಸ್ಟ್ 2004ರಲ್ಲಿ ಎವಿಆರ್‍ಸಿ ಹೆಸರನ್ನು ಶೈಕ್ಷಣಿಕ ಬಹು- ಮಾಧ್ಯಮ ಸಂಶೋಧನಾ ಕೇಂದ್ರ (ಇಎಂಎಂಆರ್‍ಸಿ) ಎಂದು ಪುನರ್ ನಾಮಕರಣ ಮಾಡಲಾಯಿತು. ಕರ್ನಾಟಕ ರಾಜ್ಯದಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ)ಯಿಂದ ಸ್ಥಾಪಿಸಲ್ಪಟ್ಟ ಏಕೈಕ ಶೈಕ್ಷಣಿಕ ಬಹು- ಮಾಧ್ಯಮ ಸಂಶೋಧನಾ ಕೇಂದ್ರವಾಗಿದೆ. 24 ಘಂಟೆ ಪ್ರಸಾರ ಮಾಡುವ ಶೈಕ್ಷಣಿಕ ಚಾನಲ್‍ಗಳಿಗೆ ಮತ್ತು ದೂರದರ್ಶನ (ಡಿ.ಡಿ1)ಕ್ಕೆ  ಶೈಕ್ಷಣಿಕ ವೀಡಿಯೋಗಳನ್ನು ತಯಾರಿಸುವ ಕೇಂದ್ರ ಇದಾಗಿದೆ.

 

ಯೋಜನೆ ಮತ್ತು ವಾಸ್ತು ಶಿಲ್ಪ ಶಾಲೆ 

ಯೋಜನೆ ಮತ್ತು ವಾಸ್ತು ಶಿಲ್ಪ ಶಾಲೆಯು 2002ರಲ್ಲಿ ಸ್ಥಾಪನೆಯಾಯಿತು. ಇದು ಮಾನಸಗಂಗೋತ್ರಿ ಆವರಣದಲ್ಲಿದ್ದು ಸ್ಪರ್ಧಾತ್ಮಕ ವಿನ್ಯಾಸದ ಕಲ್ಪನೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಒತ್ತುನೀಡುತ್ತಿದೆ. ಶಾಲೆಯು ಯುವ ಪ್ರತಿಭೆಗಳ  ವಾಸ್ತು ಶಿಲ್ಪವಿನ್ಯಾಸವನ್ನು ಉತ್ತೇಜಿಸುತ್ತದೆ. ಶಾಲೆಯಲ್ಲಿ B.Arch, B.Tech(Planning) and M.Arch  ವಿಷಯಗಳನ್ನು ಬೋಧಿಸುತ್ತಿದ್ದು ಈ ವಿಷಯಗಳು ಸಾಮಾನ್ಯ(ನಿಶ್ಚಿತವಾದ) ಸಮಯದಲ್ಲಿ ನಡೆಯುತ್ತವೆ. ಈ ಎಲ್ಲಾ ವಿಷಯಗಳು Council of Architecture (COA)ನಿಂದ ಮಾನ್ಯತೆ ಪಡೆದಿವೆ. ಪಠ್ಯಕ್ರಮವು ವಿದ್ಯಾರ್ಥಿ-ಸ್ನೇಹಿಯಾಗಿ ರೂಪಿತವಾಗಿದೆ. ಇಲ್ಲಿ ಪದವಿ ಹೊಂದಿದ ವಿದ್ಯಾರ್ಥಿಗಳು ಸ್ವತಂತ್ರವಾಗಿ ವಾಸ್ತು ಶಿಲ್ಪ ಯೋಜನೆಗಳನ್ನು ಕೈಗೊಳ್ಳಬಹುದು ಅಥವಾ ವಾಸ್ತು ಶಿಲ್ಪ ಯೋಜನೆಗಳನ್ನು ರೂಪಿಸುವ ಕಛೇರಿಗಳಲ್ಲಿ, ಸಂಸ್ಥೆಗಳಲ್ಲಿ ದುಡಿಯುವ ಸಾಮರ್ಥ್ಯವುಳ್ಳವರಾಗಿರುತ್ತಾರೆ.

 

ಆಡಳಿತ ಕಛೇರಿಗಳು

ವಿಶ್ವವಿದ್ಯಾನಿಲಯದ ಆಡಳಿತ ಕಛೇರಿಗಳು ಮೈಸೂರಿನ ಭವ್ಯ ಕಟ್ಟಡವಾಗಿರುವ ಕ್ರಾಫರ್ಡಭವನದಲ್ಲಿವೆ. ಇಲ್ಲಿ ಮಾನ್ಯ ಕುಲಪತಿಗಳು, ಕುಲಸಚಿವರು, ಕುಲಸಚಿವರು(ಪರೀಕ್ಷಾಂಗ), ಹಣಕಾಸು ಅಧಿಕಾರಿಗಳ ಕಛೇರಿಗಳಿಗೆ. ವಿವಿಧ ಶಾಖೆಗಳಲ್ಲಿ ಆಡಳಿತ ಸಿಬ್ಬಂಧಿಗಳು, ಸಹಾಯಕರು ಇತರೆ ಸಿಬ್ಬಂಧಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ನಾತಕೋತ್ತರ ವಿಭಾಗಗಳ ಚಟುವಟಿಕೆಗಳನ್ನು ನೋಡಿಕೊಳ್ಳಲು ಆಡಳಿತಾಧಿಕಾರಿಗಳ ಕಛೇರಿಯು ಮಾನಸಗಂಗೋತ್ರಿಯಲ್ಲಿದೆ. 

 

ಸಭಾಂಗಣಗಳು

ವಿಶ್ವವಿದ್ಯಾನಿಲಯದಲ್ಲಿನ ವಿವಿಧ ಬಗೆಯ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾಗಿ ಏಳು ಸಭಾಂಗಣಗಳಿಗೆ ಅವುಗಳೆಂದರೆ ಮಹಾರಾಜ ಕಾಲೇಜು ಶತಮಾನೋತ್ಸವ ಸಭಾಂಗಣ, ಲಲಿತ ಕಲಾ ಕಾಲೇಜು ಸಭಾಂಗಣ, ಮಾನಸಗಂಗೋತ್ರಿಯ ಮಾನವಿಕ ಸಭಾಂಗಣ, ಬಿ.ಎನ್. ಬಹದ್ದೂರ್ ಮ್ಯಾನೇಜ್ ಮೆಂಟ್ ಸೈನ್ಸ್ ವಿಭಾಗದಲ್ಲಿರುವ ಸಭಾಂಗಣ, ಶೈಕ್ಷಣಿಕ ಬಹು- ಮಾಧ್ಯಮ ಸಂಶೋಧನಾ ಕೇಂದ್ರದ ಸಭಾಂಗಣ,  ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪಕ್ಕದಲ್ಲಿರುವ ಬಿ.ಎಂ.ಶ್ರೀ. ಸಭಾಂಗಣ ಮತ್ತು ಸೆನೆಟ್ ಭವನದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣ, ಇದಲ್ಲದೆ ಬಹುಪಾಲು ಅಧ್ಯಯನ ವಿಭಾಗಗಳು ಅನುಕೂಲಕರವಾದ ಕಾರ್ಯಾಗಾರ, ವಿಚಾರಗೋಷ್ಠಿಗಳನ್ನು ನಡೆಸಬಲ್ಲ ಸಾಮರ್ಥ್ಯವುಳ್ಳ ಸಭಾಂಗಣಗಳನ್ನು ಹೊಂದಿವೆ. ಮಾನಸಗಂಗೋತ್ರಿಯಲ್ಲಿ 10,000 ವೀಕ್ಷಕರು ವೀಕ್ಷಿಸಬಹುದಾದಷ್ಟು ವಿಶಾಲವಾದ ಬಯಲು ರಂಗಮಂದಿರವಿದೆ.

 

ವಿಶ್ವವಿದ್ಯಾನಿಲಯದ ಅಧಿಕಾರವರ್ಗಗಳು

ಸಿಂಡಿಕೇಟ್, ಶೈಕ್ಷಣಿಕ ಮಂಡಳಿ, ಹಣಸಾಸು ಸಮಿತಿ, ಯೋಜನೆ, ಉಸ್ತುವಾರಿ ಮತ್ತು ಮೌಲ್ಯಮಾಪನ ಮಂಡಳಿ, ಐದು ಅಧ್ಯಾಪಕ ವೃಂದ ಮತ್ತು ಶಿಕ್ಷಣ ಮಂಡಳಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ 2000ರ ಪ್ರಕಾರ ಆಡಳಿತ ನಡೆಸುತ್ತವೆ.

 

ಪ್ರಸಾರಾಂಗ ಮತ್ತು ಮುದ್ರಣಾಲಯ

ವಿಶ್ವವಿದ್ಯಾನಿಲಯವು ತನ್ನ ಎಲ್ಲಾ ರೀತಿಯ ಮುದ್ರಣ ಕಾರ್ಯಕ್ಕಾಗಿ ತನ್ನದೇ ಮುದ್ರಣಾಲಯವನ್ನು ಹೊಂದಿದೆ. ಪ್ರಸಾರಾಂಗ ಪ್ರಕಟಣಾಲಯದಿಂದ 2,500ಕ್ಕೂ ಹೆಚ್ಚಿನ ವಿವಿಧ ವಿಷಯಗಳ ಪುಸ್ತಕಗಳು, ವಿಶ್ವಕೋಶಗಳು, ಪ್ರಬಂಧಗಳು ಹಾಗೂ ಪಠ್ಯಪುಸ್ತಕಗಳು  ಪ್ರಕಟವಾಗಿವೆ

 

ಹಸಿರು ಆವರಣ

ಮೈಸೂರು ವಿಶ್ವವಿದ್ಯಾನಿಲಯವು ತನ್ನ ಆವರಣದಲ್ಲಿ ಸೌರ ಶಕ್ತಿಯ ಬೀದಿದೀಪಗಳನ್ನು ಅಳವಡಿಸಿ ಇಡೀ ಆವರಣ ಸೌರಮಯವಾಗಿದೆ. ವಿಶ್ವವಿದ್ಯಾನಿಲಯ ಆವರಣವು ವಿವಿಧ ಹೂಗಳಿಂದ ತುಂಬಿದ ಉದ್ಯಾನವನಗಳು, ಲಾನ್‍ಗಳಿಂದ ಕೂಡಿದೆ. ಪ್ರಪಂಚದ ಇತರೆ ಉತ್ಕೃಷ್ಠ ವಿಶ್ವವಿದ್ಯಾನಿಲಯಗಳಲ್ಲಿರುವಂತೆ ಆಹ್ಲಾದಕರ ಹವಾಮಾನ, ಶಬ್ದರಹಿತ ಪರಿಸರ ದೊರೆಯುತ್ತದೆ.

ಬ್ಯಾಂಕ್ ಸೇವೆ

ವಿಶ್ವವಿದ್ಯಾನಿಲಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎರಡು ಶಾಖೆಗಳಿವೆ. ಮಾನಸಗಂಗೋತ್ರಿ ಆವರಣದಲ್ಲಿ ಒಂದು ಮತ್ತು ಕ್ರಾಫರ್ಡಭವನದಲ್ಲಿ ಮತ್ತೊಂದು ಕಾರ್ಯನಿರ್ವಹಿಸುತ್ತಿವೆ. ಈ ಎರಡೂ ಶಾಖೆಗಳು ATM ವ್ಯವಸ್ಥೆಯನ್ನು ಒಳಗೊಂಡಿವೆ.

 

 ಕೆಫೆಟೇರಿಯಾ

ಮಾನಸಗಂಗೋತ್ರಿಯ ಮಧ್ಯದಲ್ಲಿರುವ ಕ್ಯಾಂಟೀನ್ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಮತ್ತು ಸಾರ್ವಜನಿಕರ ಆಹಾರದ ಅಗತ್ಯತೆಗಳನ್ನು ಪೂರೈಸುತ್ತದೆ.

 

ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರ

ಶೈಕ್ಷಣಿಕ ಬಹು- ಮಾಧ್ಯಮ ಸಂಶೋಧನಾ ಕೇಂದ್ರದಲ್ಲಿರುವ ಕಟ್ಟಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರವು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಾದ IAS, IPS, IFS, NET, SET, Banking ಮುಂತಾದ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಿ ಅವರನ್ನು ಸಮರ್ಥರನ್ನಾಗಿಸುತ್ತದೆ.

 

ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸೇವಾ ಕೇಂದ್ರ (ಸಿಪಿಡಿಪಿಎಸ್)

 ಜಾಗತೀಕರಣ ಹಿನ್ನಲೆಯಲ್ಲಿ  ಇಂದು ಉದ್ಯೋಗಕ್ಕಾಗಿ ವ್ಯಕ್ತಿಗತ ಸಾಮರ್ಥ್ಯ ಮತ್ತು ಸಾಮಾಜಿಕ ಭಾಗವಹಿಸುವಿಕೆ ಅವಶ್ಯಕವಿದೆ. ಅಭ್ಯರ್ಥಿಗಳು ಭಾಷಾ ಸಾಮರ್ಥ್ಯ, ವಿಶ್ಲೇಷಣಾತ್ಮಕ, ಅನ್ವಯ, ಸಂಘಟನಾ, ಅಂತರ-ವ್ಯಕ್ತಿಗತ, ಅನನ್ಯತೆ ಕೌಶಲ್ಯ ಹೊಂದಿದವರಾಗಿರಬೇಕು ಈ ಸಂಬಂಧ ತರಬೇತಿಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸೇವಾ ಕೇಂದ್ರವನ್ನು ಸ್ಥಾಪಿಸಿದೆ. ಈ ಕೇಂದ್ರವು ವಿವಿಧ ಕೈಗಾರಿಕೆ ಮತ್ತು ಇನ್ನಿತರ ಸಂಸ್ಥೆಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ ಹಾಗೂ ಉದ್ಯೋಗಾವಾಕಾಶಗಳ ಮಾಹಿತಿಯನ್ನು ಕಲೆಹಾಕುತ್ತದೆ. ನಿರುದ್ಯೋಗಿ ಪದವೀಧರರಿಗೆ ಮತ್ತು ವಿದ್ಯಾರ್ಥಿಗಳಿಗೆ ನೇರ-ಕ್ಯಾಂಪಸ್ ಮತ್ತು ಹೊರ-ಕ್ಯಾಂಪಸ್ ಮೂಲಕ ಬೇರೆ ಬೇರೆ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ವೇದಿಕೆ ಕಲ್ಪಿಸುತ್ತದೆ ಮತ್ತು ಮಾಹಿತಿಗಳನ್ನು ಒದಗಿಸುತ್ತದೆ.

 

ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಬ್ಯೂರೊ

ವಿಶ್ವವಿದ್ಯಾನಿಲಯದ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಬ್ಯೂರೊ ಮಾನಸಗಂಗೋತ್ರಿಯ ವಿಶ್ವವಿದ್ಯಾನಿಲಯ ಗ್ರಂಥಾಲಯದ ಕಟ್ಟಡದಲ್ಲಿದೆ. ಈ ಕಛೇರಿಯಲ್ಲಿ ಉದ್ಯೋಗ ಮಾಹಿತಿ ಕರಪತ್ರಗಳು, ಕಿರುಹೊತ್ತಿಗೆಗಳನ್ನು ಪ್ರದರ್ಶಿಸಲಾಗುತ್ತದೆ. ಹಲವು ವಿಷಯಗಳಲ್ಲಿ ದೊರಕುವ ಉದ್ಯೋಗ ಮಾಹಿತಗಳ ಉಪನ್ಯಾಸ ಮತ್ತು ವಿಚಾರ ಸಂಕಿರಣಗಳನ್ನು ನಡೆಸುತ್ತಿದ್ದು, ವಿದೇಶಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯಗಳಲ್ಲಿರುವ ಕೋರ್ಸ್‍ಗಳ ಬಗ್ಗೆ ಹಾಗೂ ಮಾಹಿತಿ ಮತ್ತು ಪ್ರವೇಶಾತಿ ನಿಯಮಗಳ ಬಗ್ಗೆ ಮಾಹಿತಿ ಮತ್ತು ವಿ.ವಿ ವಿದ್ಯಾರ್ಥಿಗಳು ಇಲ್ಲಿ ನೊಂದಣಿಗೊಂಡು ಉದ್ಯೋಗಗಳ ಮಾಹಿತಿಯನ್ನು ಪಡೆಯಬಹುದಾಗಿದೆ.

 

ಆರೋಗ್ಯ ಕೇಂದ್ರಗಳು

ವಿ.ವಿಯಲ್ಲಿ ಎರಡು ಆರೋಗ್ಯ ಕೇಂದ್ರಗಳಿದ್ದು. ಒಂದು ಮಹಾರಾಜ ಕಾಲೇಜು ಆವರಣದಲ್ಲಿ ಮತ್ತೊಂದು ಮಾನಸಗಂಗೋತ್ರಿ ಆವರಣದಲ್ಲಿದೆ. ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು, ಅಧ್ಯಾಪಕವೃಂದ ಮತ್ತು ಸಿಬ್ಬಂದಿಗಳು ಇಲ್ಲಿ ವೈದ್ಯಕೀಯ ಸೇವೆಯನ್ನು ಪಡೆಯಬಹುದಾಗಿದೆ.

 

ಅಂತಾರಾಷ್ಟ್ರೀಯ ಕೇಂದ್ರ

ಅಂತಾರಾಷ್ಟ್ರೀಯ ಕೇಂದ್ರವು ಮಾನಸಗಂಗೋತ್ರಿಯಲ್ಲಿರುವ ಲಲಿತಕಲೆ ಕಾಲೇಜಿನ ಕಟ್ಟಡದಲ್ಲಿದೆ. ಇದು ವಿದೇಶಿ ವಿದ್ಯಾರ್ಥಿಗಳ ಅವಶ್ಯಕತೆಗಳನ್ನು ಪೂರೈಸುವ ಮಾಹಿತಿ ಕೇಂದ್ರವಾಗಿದೆ. ವಿದೇಶಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಿಗೆ ಪ್ರವೇಶಾತಿ, ಅರ್ಹತೆ, ವೀಸಾ, ಸಂಬಂಧಿಸಿದಂತೆ ನೆರವು ನೀಡುತ್ತದೆ.

 

ಇಂಟರ್‍ನೆಟ್ ಸೌಲಭ್ಯ

ಮಾನಸಗಂಗೋತ್ರಿಯ ಎಲ್ಲಾ ಅಧ್ಯಯನ ವಿಭಾಗಗಳು, ಆಡಳಿತ ಶಾಖೆಗಳು ಮತ್ತು ಗ್ರಂಥಾಲಯಗಳು ಉತ್ತಮ ಹೈಸ್ಪೀಡ್ ಇಂಟರ್‍ನೆಟ್ ಮತ್ತು ವೈಫೈ ಸಂಪರ್ಕ ಹೊಂದಿವೆ. 

 

ಕೆ-ಸೆಟ್ ಕೇಂದ್ರ

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ವಿಶ್ವವಿದ್ಯಾನಿಲಯಗಳು/ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಯುಜಿಸಿ-ಎನ್ ಇಟಿ ಮತ್ತು ಕೆ-ಸೆಟ್‍ನಲ್ಲಿ ಅರ್ಹರಾಗಬೇಕೆಂದು ತಿಳಿಸಿದೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ಕೆ-ಸೆಟ್ ಪರೀಕ್ಷೆ ನಡೆಸಲು ಮೈಸೂರು ವಿಶ್ವವಿದ್ಯಾನಿಲಯವನ್ನು ನೋಡಲ್ ಕೇಂದ್ರವಾಗಿ ಗುರುತಿಸಿದೆ. ಈ ಕೇಂದ್ರವು ಮಾನಸಗಂಗೋತ್ರಿಯ ಮೌಲ್ಯ ಭವನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ http://kset.uni-mysore.ac.in/ ವೆಬ್‍ಸೈಟ್ ಅನ್ನು ವೀಕ್ಷಿಸಬಹುದಾಗಿದೆ.

 

ಗ್ರಂಥಾಲಯ

ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಗ್ರಂಥಾಲಯವು ಮಾನಸಗಂಗೋತ್ರಿ ಆವರಣದಲ್ಲಿದ್ದು, ವಿದ್ಯಾರ್ಥಿಗಳ, ಸಂಶೋಧನಾ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕವೃಂದರವರ ಜ್ಞಾನಾರ್ಜನೆಯ ಅವಶ್ಯಕತೆಯನ್ನು ಪೂರೈಸುತ್ತದೆ. 75,000ಕ್ಕೂ ಅಧಿಕ ನಿಯತಕಾಲಿಕಗಳ ಸಂಪುಟಗಳಿಗೆ, 6 ಲಕ್ಷ  reference and textbooks  ಲಭ್ಯವಿದೆ. 18000 ಈ-ಪುಸ್ತಕಗಳು 7500 ಜರ್ನಲ್‍ಗಳು ಆನ್ ಲೈನ್ ಪುಸ್ತಕಗಳ ಕ್ಯಾಟಲಾಗ್. ಕೆಳಕಂಡ ಸೌಲಭ್ಯಗಳನ್ನು ಈ ಗ್ರಂಥಾಲಯವು ಒದಗಿಸುತ್ತದೆ.

•In-house reference, consultation and home-lending.

•Inter-library loan facility.

•In-house photocopying facility.

•Textbook reference.

•Textbook loan service.

•Digital Information Resource Centre.

•Centre for Information Resources for Competitive Examinations.

•Access is enabled to more than 7500 UGC-Infonet Journals and 18000 e-books.

•Assistive technologies have been installed to facilitate access to information resources for visually challenged students.

•Inflibnet services.

ವರ್ಷಪೂರ್ತಿ ಎಲ್ಲಾ ಕೆಲಸದ ದಿನಗಳಲ್ಲಿ ಗ್ರಂಥಾಲಯವು ಬೆಳಿಗ್ಗೆ 8 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ತೆರೆದಿರುತ್ತದೆ. ರಜಾ ದಿನಗಳನ್ನು ಹೊರತು ಪಡಿಸಿ.

 

ಅಂಚೆ ಸೇವೆ

ಭಾರತೀಯ ಅಂಚೆ ಕಛೇರಿಗಳು ಮಾನಸಗಂಗೋತ್ರಿ ಆವರಣದಲ್ಲಿ ಒಂದು, ಕ್ರಾಫರ್ಡಭವನದಲ್ಲಿ ಮತ್ತೊಂದು. ಈ ಎರಡು ಅಂಚೆ ಕಛೇರಿಗಳಲ್ಲಿ ಸ್ಟೀಡ್ ಪೋಸ್ಟ್, ಉಳಿತಾಯ ಖಾತೆ ಸೌಲಭ್ಯವಿದೆ.

 

ವಿದ್ಯಾರ್ಥಿ ವೇತನ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉನ್ನತ ಶ್ರೇಣಿಯ ವಿದ್ಯಾರ್ಥಿಗಳಿಗೆ ಮತ್ತು ಅವಶ್ಯಕತೆ ಹೊಂದಿರುವ ವಿದ್ಯಾರ್ಥಿ ವೇತನ ಯೋಜನೆಗಳನ್ನು ಹೊರತಂದಿವೆ. ಇದಕ್ಕೆ ಹೆಚ್ಚುವರಿಯಾಗಿ ರಾಜಕೀಯವಾಗಿ ತೊಂದರೆಗೊಳಗಾದವರ ಮಕ್ಕಳಿಗೆ, ಸೈನ್ಯದಲ್ಲಿ ಕೆಲಸ ಮಾಡಿದವರ ಮಕ್ಕಳಿಗಾಗಿ ವಿದ್ಯಾರ್ಥಿವೇತನ ಮತ್ತು ವಿಕಲಚೇತನರು, ಆರ್ಥಿಕವಾಗಿ ಅಶಕ್ತರಾದ ವಿದ್ಯಾರ್ಥಿಗಳೂ ಕೂಡ ವಿದ್ಯಾರ್ಥಿವೇತನಕ್ಕೆ ಭಾಜನರಾಗುತ್ತಾರೆ.

 

ಪರಿಶಿಷ್ಟ ಜಾತಿ/ಪಂಗಡದವರಿಗಾಗಿ ವಿಶೇಷ ಘಟಕ

ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ವಿಶೇಷ ಘಟಕವಿದೆ. ಪರಿಶಿಷ್ಟ ಜಾತಿ/ಪಂಗಡ ವರ್ಗದ ವಿದ್ಯಾರ್ಥಿಗಳಿಗೆ ಈ ಘಟಕವು ವಿದ್ಯಾರ್ಥಿವೇತನವನ್ನು ನೀಡುತ್ತದೆ.  IAS, IPS, IFS, NET, SET, Banking ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತದೆ. ಸಂವಹನ ಕೌಶಲ್ಯವನ್ನು ಹೆಚ್ಚಿಸಲು ಬ್ರಿಡ್ಜ್ ಕೋರ್ಸ್ ಅನ್ನು ಉತ್ತಮ ಗ್ರಂಥಾಲಯ ಸೌಲಭ್ಯದೊಂದಿಗೆ ಸಾಮಾನ್ಯ ಜ್ಞಾನ ಮತ್ತು ಕಂಪ್ಯೂಟರ್ ಬಗೆಗಿನ ತರಗತಿಗಳನ್ನು ನಡೆಸುತ್ತದೆ. ಸಮಾಜ ಕಲ್ಯಾಣ ಇಲಾಖೆ ಮೂಲಕ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವನ್ನು ಒದಗಿಸಲು ಸಹಾಯಕವಾಗಿದೆ.

 

ಕ್ರೀಡಾ ಸೌಲಭ್ಯ

ಪ್ರತ್ಯೇಕ ದೈಹಿಕ ಶಿಕ್ಷಣ ನಿರ್ದೇಶನಾಲಯವು ಕ್ರೀಡಾ ಚಟುವಟಿಕೆಯ ಜವಾಬ್ದಾರಿ ಹೊಂದಿದೆ. ಸ್ನಾತಕೋತ್ತರ ಕ್ರೀಡಾ ಮಂಡಳಿಯು ಸ್ನಾತಕೋತ್ತರ ವಿಭಾಗಗಳ ಕ್ರೀಡಾ ಚಟುವಟಿಕೆಯನ್ನು ನೋಡಿಕೊಳ್ಳುತ್ತದೆ. ಮೈ.ವಿ.ವಿಯಲ್ಲಿ ವಿಶಾಲವಾದ ಕ್ರೀಡಾ ಮೈದಾನ, ಕ್ರಿಕೆಟ್ ಸ್ಟೇಡಿಯಂ, ಟೆನ್ನಿಸ್ ಕೋರ್ಟ್, ಜಿಮ್ನಾೀಷಿಯಂ ಹಾಗೂ ಸುಸಜ್ಜಿತವಾದ ಈಜುಕೊಳಗಳಿವೆ. ವಿದ್ಯಾರ್ಥಿಗಳು, ಅಧ್ಯಾಪಕವೃಂದ ಮತ್ತು ಕ್ರೀಡಾಸಕ್ತರು ಇವುಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ನಾಲ್ವಾಡಿ ಕೃಷ್ಣರಾಜ ಒಡೆಯರ್, ಗಂಗೋತ್ರಿ ಗ್ಲೇಡ್ಸ್ ಮತ್ತು ಮೂರು ಒಳಾಂಗಣ ಕ್ರೀಡಾಂಗಣಗಳು ಸಹ ಲಭ್ಯವಿವೆ.

 

ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಾನಾಲಯ

ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಾನಾಲಯವು ಮಾನಸಗಂಗೋತ್ರಿಯ ಶೈಕ್ಷಣಿಕ ಬಹು- ಮಾಧ್ಯಮ ಸಂಶೋಧನಾ ಕೇಂದ್ರದ ಕಟ್ಟಡದಲ್ಲಿದೆ.  ವಿದ್ಯಾರ್ಥಿಗಳ ಕ್ಷೇಮಪಾಲನಾ ಕೇಂದ್ರವು ಅನೇಕ ವಾರ್ಷಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುತ್ತದೆ. ಅವುಗಳೆಂದರೇ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು, ವಿ.ವಿ ಸ್ಟರ್ಧೆಗಳು ಕಾಲಕಾಲಕ್ಕನುಗುಣವಾಗಿ ರಾಜ್ಯ/ವಲಯ/ರಾಷ್ಟ್ರ/ಅಂತರಾಷ್ಟ್ರೀಯ ಯುವ ಸಂಭ್ರಮವನ್ನು ಆಯೋಜಿಸುತ್ತದೆ.

 

ಸಾರಿಗೆ ಸೇವೆಗಳು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನಗರದ ಎಲ್ಲಾ ಭಾಗಗಳಿಂದ 20 ನಿಮಿಷಕ್ಕೊಮ್ಮೆ ಮಾನಸಗಂಗೋತ್ರಿ ಆವರಣಕ್ಕೆ ಬಸ್ಸುಗಳನ್ನು ನಿಯೋಜಿಸಿದೆ. ಮಾನಸಗಂಗೋತ್ರಿ ಆವರಣವು ನಗರ ಬಸ್ಸು ನಿಲ್ದಾಣದಿಂದ 6 ಕಿ.ಮೀ ಮತ್ತು ರೈಲ್ವೇ ನಿಲ್ದಾಣದಿಂದ 3 ಕಿ.ಮೀ ದೂರವಿದೆ.

 

ಮಹಿಳೆಯರಿಗಾಗಿ ಸೌಲಭ್ಯ ಕೇಂದ್ರ

ವಿಶ್ವವಿದ್ಯಾನಿಲಯವು ಮಹಿಳೆಯರಿಗಾಗಿ ಸೌಲಭ್ಯ ಕೇಂದ್ರವನ್ನು ಹೊಂದಿದೆ. ಈ ಕೇಂದ್ರವು ಗಣಕ ವಿಜ್ಞಾನ ಅಧ್ಯಯನ ವಿಭಾಗದ ಪಕ್ಕದಲ್ಲಿದೆ. ಇದು ವಿವಿಧ ಅಧ್ಯಯನ ವಿಭಾಗಗಳಿಂದ, ಇತರೆ ಪ್ರದೇಶದಿಂದ ಆಗಮಿಸುವ ಮಹಿಳಾ ವಿದ್ಯಾರ್ಥಿಗಳಿಗೆ ಸಾಮಾನ್ಯ ವಿಶ್ರಾಂತಿ ಕೇಂದ್ರವಾಗಿದೆ.

 

Ragging ವಿರೋಧಿ

ಮೈಸೂರು ವಿಶ್ವವಿದ್ಯಾನಿಲಯವು ಶಿಕ್ಷಾರ್ಹ Ragging ರಹಿತ ಪ್ರದೇಶವಾಗಿದೆ. ಯಾವ ವಿದ್ಯಾರ್ಥಿಯೂ ಯಾವುದೇ ರೀತಿಯ Ragging ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಣೆಗೆ ಸಹಿಹಾಕಬೇಕು.

 

ಧೂಮಪಾನ ರಹಿತ ಪ್ರದೇಶ

ಮೈ.ವಿ.ವಿಯು ಎಲ್ಲಾ  ಸ್ನಾತಕೋತ್ತರ ಆವರಣಗಳನ್ನು ಧೂಮಪಾನ ರಹಿತ ಪ್ರದೇಶಗಳು ಎಂದು ಘೋಷಿಸಿದೆ. ಮೈ.ವಿ.ವಿ ಆವರಣದಲ್ಲಿ ಧೂಮಪಾನ ಮಾಡುವವರು ಶಿಕ್ಷಾರ್ಹರು. 

 

ವಿದ್ಯಾರ್ಥಿನಿಲಯಗಳು

ಮೈ.ವಿ.ವಿಯಲ್ಲಿ 7 ಪುರುಷ ಮತ್ತು 4 ಮಹಿಳಾ ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಅವು ಕೆಳಕಂಡಂತಿವೆ, ಈ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ/ಮಾಹಿತಿಗಾಗಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಾನಾಲಯ ಕಛೇರಿಯನ್ನು ಸಂಪರ್ಕಿಸಬಹುದು.

1.ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ವಿದ್ಯಾರ್ಥಿನಿಲಯ

2.ಪುರುಷರ ಸ್ನಾತಕೋತ್ತರ ವಿದ್ಯಾರ್ಥಿನಿಲಯ (ಮುಖ್ಯ ಬ್ಲಾಕ್), ಮಾನಸಗಂಗೋತ್ರಿ

3.ಪುರುಷರ ಸ್ನಾತಕೋತ್ತರ ವಿದ್ಯಾರ್ಥಿನಿಲಯ (ಹೊಸ ಬ್ಲಾಕ್), ಮಾನಸಗಂಗೋತ್ರಿ

4.ಮಹಿಳೆಯರ ಸ್ನಾತಕೋತ್ತರ ವಿದ್ಯಾರ್ಥಿನಿಲಯ (ಹೊಸ ಬ್ಲಾಕ್), ಮಾನಸಗಂಗೋತ್ರಿ

5.ಮಹಿಳೆಯರ ಸ್ನಾತಕೋತ್ತರ ವಿದ್ಯಾರ್ಥಿನಿಲಯ (ಹೊಸ ವಿಂಗ್), ಮಾನಸಗಂಗೋತ್ರಿ

6.ಮಹಿಳೆಯರ ಸ್ನಾತಕೋತ್ತರ ವಿದ್ಯಾರ್ಥಿನಿಲಯ (ಹಳೆಯ ವಿಂಗ್), ಮಾನಸಗಂಗೋತ್ರಿ

7.ವಿದ್ಯಾರ್ಥಿಗಳ ವಿಲೇಜ್ ವಿದ್ಯಾರ್ಥಿನಿಲಯ

8.ಸ್ನಾತಕೋತ್ತರ ವಿ.ವಿ ವಿದ್ಯಾರ್ಥಿನಿಲಯ-2, ಸರಸ್ವತಿಪುರಂ, ಮೈಸೂರು

9.ಪುರುಷರ ಸ್ನಾತಕೋತ್ತರ ವಿದ್ಯಾರ್ಥಿನಿಲಯ, ಸ್ನಾತಕೋತ್ತರ ಕೇಂದ್ರ,  ಹಾಸನ

10.ಪುರುಷರ ಸ್ನಾತಕೋತ್ತರ ವಿದ್ಯಾರ್ಥಿನಿಲಯ, ಸ್ನಾತಕೋತ್ತರ ಕೇಂದ್ರ,  ಮಂಡ್ಯ

11.ಮಹಿಳೆಯರ ಸ್ನಾತಕೋತ್ತರ ವಿದ್ಯಾರ್ಥಿನಿಲಯ. ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ, ಚಾಮರಾಜನಗರ

 

ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಲಯಗಳ ಕೈಪಿಡಿ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ

 

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿಕಲಚೇತರ ವಿದ್ಯಾರ್ಥಿಗಳಿಗೆ ಪ್ರಸ್ತುತ ಇರುವ ಸೌಲಭ್ಯಗಳನ್ನು ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ