1980ರ ದಶಕದಲ್ಲಿ ಸಸ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸೂಕ್ಷ್ಮಜೀವಶಾಸ್ತ್ರವು ಪ್ರಾರಂಭವಾಯಿತು. ಈ ವಿಷಯದ ಬಗ್ಗೆ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಪರಿಗಣಿಸಿ ಎಂ. ಎಸ್ಸಿ. ಸೂಕ್ಷ್ಮಜೀವಶಾಸ್ತ್ರದ ಅವಶ್ಯಕತೆ ಇದೆ ಎಂದು ಪರಿಗಣಿಸಿ ಪಠ್ಯಕ್ರಮವನ್ನು ಅಭಿವೃದ್ದಿ ಪಡಿಸಿತು. ಮತ್ತು ಕೋರ್ಸ್‍ನ್ನು ವಿನ್ಯಾಸಗೊಳಿಸಿತು. 1992ರಲ್ಲಿ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಆರ್ಥಿಕ ಹೊರೆ ಇಲ್ಲದೆ ಮತ್ತು ಸಮಾಜದ ಅವಶ್ಯಕತೆಗಳನ್ನು ಪರಿಗಣಿಸಿ ಎಂ. ಎಸ್ಸಿ. ಸೂಕ್ಷ್ಮಜೀವಶಾಸ್ತ್ರವನ್ನು ಪ್ರಾರಂಭಿಸಲಾಯಿತು. 1999ರಲ್ಲಿ ಸಸ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರತ್ಯೇಕ ವಿಭಾಗವಾಗಿ  ಇರಿಸಲಾಯಿತು. ಪ್ರೊ. ಶಂಕರ ಭಟ್ ಸಂಸ್ಥಾಪಕ ಪ್ರೊಫೆಸರ್ ಮತ್ತು ವಿಭಾಗದ ಸಂಯೋಜಕರಾಗಿದ್ದರು. ನಂತರ 23 ಜುಲೈ 2008ರಂದು ಸಸ್ಯಶಾಸ್ತ್ರದಿಂದ ಬೇರ್ಪಟ್ಟು ಪ್ರತ್ಯೇಕ ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ವಿಭಾಗವಾಗಿ ಸ್ಥಾಪಿತವಾಯಿತು. ಪ್ರೊ. ವಿ. ರವಿಶಂಕರ್ ರೈ ವಿಭಾಗದ ಅಧ್ಯಕ್ಷರಾಗಿದ್ದರು. ಪ್ರಸ್ತುತ ಲೈಫ್ ಸೈನ್ಸ್ ಕಟ್ಟಡದಲ್ಲಿದೆ. 

 

ವಿಭಾಗದ ದೃಷ್ಟಿಕೋನವು ಸೂಕ್ಷ್ಮಜೀವವಿಜ್ಞಾನದಲ್ಲಿ ಜ್ಞಾನ ಮತ್ತು ಕೌಶಲಗಳಿಗೆ ಪರಿಣಾಮಕಾರಿಯಾಗಿದ್ದು, ವಿದ್ಯಾರ್ಥಿಗಳಿಗೆ ಸಸ್ಯ, ಪ್ರಾಣಿ ಮತ್ತು ಮಾನವ ಆರೋಗ್ಯ, ಪರಿಸರ, ಉದ್ಯಮ ಮತ್ತು ಸಾಮಾನ್ಯ ಮಾನವ ಕಲ್ಯಾಣದಲ್ಲಿ ಸೂಕ್ಷ್ಮಜೀವಿಗಳ ಪ್ರಾಮುಖ್ಯತೆಯ ಅರಿವಿನ ಮೂಲಕ ಸಮಸ್ಯೆ ಆಧಾರಿತ ಮತ್ತು ಕೌಶಲ್ಯ ಆಧಾರಿತ ಪಠ್ಯಕ್ರಮ ತರಬೇತಿ ಪಡೆದ ಸೂಕ್ಷ್ಮ ಜೀವವಿಜ್ಞಾನಿಗಳ ರಾಷ್ಟ್ರೀಯ ಗುರಿಯನ್ನು ಸಾಧಿಸಲು ವೈಜ್ಞಾನಿಕ ಮತ್ತು ತಾಂತ್ರಿಕ ಮಾನವ ಶಕ್ತಿಯನ್ನು ಉತ್ಪಾದಿಸಲು ಬಯಸುತ್ತದೆ. 

 

ವಿಭಾಗವು ಉತ್ತಮ ಸಂಶೋಧನಾ ಪ್ರಯೋಗಾಲಯ ಸೌಲಭ್ಯವನ್ನು ಹೊಂದಿದೆ. ಇದು ಸಾವಯವ ಸಮುದಾಯ, ತೋಟದ ಬೆಳೆಗಾರರು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಸ್ಯ ನರ್ಸರಿಗಳಿಗೆ ರೋಗಕಾರಕ ಜೀವಿಗಳನ್ನು ಗುರುತಿಸುವಲ್ಲಿ ಉಚಿತ ಸಲಹಾ ಸೇವೆಗಳನ್ನು ಒದಗಿಸುತ್ತದೆ ಮತ್ತು ಪ್ಲಾಂಟ್ ಕ್ಲಿನಿಕ್ ಪ್ರೋಗ್ರಾಂ ಮೂಲಕ ಸಸ್ಯರೋಗಗಳನ್ನು ನಿಬಾಯಿಸಲು ಮತ್ತು ನಿರ್ವಹಿಸುವ ನಿಯಂತ್ರಣ ಕ್ರಮಗಳನ್ನು ಸೂಚಿಸುತ್ತದೆ.

 

ವಿಭಾಗವು ಎಂ. ಎಸ್ಸಿ (ನಾಲ್ಕು ಸೆಮಿಸ್ಟರ್‍ಗಳು) ಮತ್ತು ಪಿ.ಹೆಚ್.ಡಿ. ಡಿಗ್ರಿಯನ್ನು ಒಳಗೊಂಡಿದೆ. ಜೀವಶಾಸ್ತ್ರದ ವ್ಯಾಪ್ತಿಯೊಳಗೆ ಸೂಕ್ಷ್ಮಜೀವವಿಜ್ಞಾನವು ಪ್ರಮುಖವಾಗಿ ಮಾನವನ ಆರೋಗ್ಯ, ರೋಗಗಳು, ಪರಿಸರೀಯ ಅಧ್ಯಯನಗಳು ಮತ್ತು ಕೈಗಾರಿಕಾ/ ಜೈವಿಕ ತಂತ್ರಜ್ಞಾನದ ಅನ್ವಯಗಳಿಗೆ ಸಂಬಂಧಿಸಿದ ವಿಷಯಗಳ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ, ಪಠ್ಯಕ್ರಮವು ಈ ವಿಷಯದ ಸಂಪೂರ್ಣ ಜ್ಞಾನದತ್ತ ಹೆಚ್ಚು ಆಧಾರಿತವಾಗಿದೆ. ಅಣ್ವಿಕ ಜೀವಶಾಸ್ತ್ರ ಮತ್ತು ತಳೀಯ ಎಂಜಿನಿಯರಿಂಗ್ ಸೇರಿದಂತೆ ಸೂಕ್ಷ್ಮಜೀವವಿಜ್ಞಾನದ ಮೂಲ ಮತ್ತು ಸಮಕಾಲೀನ ಅನ್ವಯಿಕ ಅಂಶಗಳು. 

 

ವಿಭಾಗದಲ್ಲಿ ಐದು ಅಧ್ಯಾಪಕರಿದ್ದು, ಇದರಲ್ಲಿ ಒಬ್ಬ ಪ್ರಾದ್ಯಾಪಕರು, ಇಬ್ಬರು ಸಹ ಪ್ರಾದ್ಯಾಪಕರು, ಇಬ್ಬರು ಸಹಾಯಕ ಪ್ರಾದ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರು ಇದ್ದಾರೆ. 2009ರಲ್ಲಿ ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ವಿಭಾಗವು  

 

DST ಯಿಂದ FIST ಕಾರ್ಯಕ್ರಮದಡಿಯಲ್ಲಿ ಗುರುತಿಸಲ್ಪಟ್ಟಿತು. 2010ರಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಚೇರ್ ಅವರ ನೇತ್ರತ್ವದಲ್ಲಿ ಸಂದರ್ಶಕ ಪ್ರಾದ್ಯಾಪಕರು ನೇಮಕಗೊಂಡಿದ್ದಾರೆ. 2012ರಲ್ಲಿ ಯು.ಜಿ.ಸಿ. ಯಿಂದ “ಆಹಾರ ಗುಣಮಟ್ಟ ಮತ್ತು ಸುರಕ್ಷತೆ” ಎಂಬ ಪಿಜಿ ಡಿಪ್ಲೋಮಾ ಕೋರ್ಸ್‍ನ್ನು ಪರಿಚಯಿಸಲು 58.5 ಲಕ್ಷ ರೂ. ಗಳನ್ನು ನೀಡಿರುತ್ತಾರೆ. ಹಾಗೂ ವಿಭಾಗದ ಅಧ್ಯಾಪಕರು ಯುಜಿಸಿ, ಎನ್‍ಎಮ್‍ಪಿಬಿ, ಐಸಿಎಂಆರ್, ಡಿಎಸ್‍ಟಿ, ಡಿಬಿಟಿ ಧನಸಹಾಯ ಆಯೋಗದ ವತಿಯಿಂದ ಮೇಜರ್ ರಿಸರ್ಚ್ ಯೋಜನೆಗಳನ್ನು ನಡೆಸುತ್ತಾರೆ. ಈ ಯೋಜನೆಗಳ ಒಚಿರಿoಡಿ ಣಡಿusಣ ಚಿಡಿeಚಿ ಗಳನ್ನೊಳಗೊಂಡ ವಿಷಯಗಳು ಈ ಕೆಳಕಂಡಂತಿವೆ. 

 ·       Structural elucidation of antimicrobial and other bioactive compounds from microbes and medicinal plants.

 ·       Fungal diversity and applications of molecular marks

 ·       Isolation and purification of secondary metabolites from endophytic fungi

 ·       Forest pathology and management of diseases

 ·       Genetic transformation of the microbes

 ·       Hospital acquired infections

 ·       Post harvest diseases of fruits and vegetables

 ·       Food – borne diseases and virulence factor against oxidative stress.

 ·       Biofilm and quorum sensing

 

 

ಲಭ್ಯವಿರುವ ಮೂಲಸೌಕರ್ಯ ಸೌಲಭ್ಯಗಳು 

ಖ್ಯಾತ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳೊಂದಿಗೆ ಸಮಾನವಾಗಿ ಬೋಧನೆ ಮತ್ತು ಸಂಶೋಧನೆ ನಡೆಸಲು ವಿಭಾಗವು ಅತ್ಯುತ್ತಮ ಮೂಲಸೌಕರ್ಯ ಸೌಲಭ್ಯಗಳನ್ನು ಹೊಂದಿದೆ. ಬೋಧನಾ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಕಾರ್ಯಕ್ಷೇತ್ರವನ್ನು ಒದಗಿಸಲಾಗಿದೆ. ಪ್ರಯೋಗಾಲಯದಲ್ಲಿ ಪಿಸಿಆರ್, ಬಯೋಫೊಟೊಮೀಟರ್, ಯುವಿ ಸ್ಪೆಕ್ಟೊಫೊಟೊಮೀಟರ್, ಇನ್ಕುಬೇಷನ್ ಚೆಂಬರ್ಸ್, ಶೇಕರ್ ಇನ್ಕುಬೇಟರ್ಸ್, ಲಾಮಿನರ್ ಏರ್ ಪ್ಲೋ, ಆಟೋಕ್ಷೇವ್, ಹೀಟರ್ಸ್, ಮೈಕ್ರೋವೇವ್, ಹಾಟ್ ಏರ್ ಓವನ್, ಎಲೆಕ್ಟ್ರೋಪೊರೆಸಿಸ್, ಟಿಎಲ್ಸಿ, ಡೀಪ್ ಪ್ರೀಜರ್ಸ್, ರೆಫ್ರಿಜರೇಟರ್ಸ್, ಹೈ ಸ್ಪೀಡ್ ಸೆಂಟ್ರಿಪ್ಯೂಜ್ ತಂಪಾಗಿಸುವಿಕೆ, ಬೆಳವಣಿಗೆಯ ಚೇಂಬರ್, ಮಲ್ಟಿಮೋಡ್ ಮೈಕ್ರೋಪ್ಲೆಟ್ ರೀಡರ್ಸ್, ಬಯೋಸೇಪ್ಟಿ ಕ್ಯಾಬಿನೆಟ್ ಇತ್ಯಾದಿ ಉಪಕರಣಗಳನ್ನು ಇರಿಸಲಾಗಿದೆ. ವಿಭಾಗವು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ನೆಟ್‍ವರ್ಕ್, ಆಂತರಿಕ ಗ್ರಂಥಾಲಯ, ಸೆಮಿನಾರ್ ಹಾಲ್, ಉಪನ್ಯಾಸ ಕೊಠಡಿ ಹಾಗೂ ಸೂಕ್ಷ್ಮಜೀವಿಯ ಕಲ್ಚರ್ ಕೊಠಡಿಯನ್ನು ಹೊಂದಿದೆ. 

 

Location

The department is located at Manasagangotri postgraduate campus of the university. Click on the image below for a detailed map of the campus and the city.


To get the directions to the department scan the following QR code