ಕನ್ನಡ ವಿಶ್ವಕೋಶ (ಸಾಮಾನ್ಯ)
 
14 ಸಂಪುಟಗಳು ಪ್ರಕಟವಾಗಿದ್ದು, ಈಗ ಇವುಗಳ ಪರಿಷ್ಕರಣ ಮತ್ತು ಪುನರ್‍ಮುದ್ರಣದ ಕಾರ್ಯವು ಪ್ರಗತಿಯಲ್ಲಿದೆ
 
ವಿಷಯ ವಿಶ್ವಕೋಶ
 
ಕನ್ನಡ ವಿಷಯ ವಿಶ್ವಕೋಶ (ಸಂಪುಟ-1 ಮತ್ತು 2), ಜಾನಪದ, ಪ್ರಾಣಿವಿಜ್ಞಾನ, ಇತಿಹಾಸ ಮತ್ತು ಪುರಾತತ್ವ, ಭೂಗೋಳವಿಜ್ಞಾನ ಸಂಪುಟಗಳು ಪ್ರಕಟವಾಗಿದ್ದು, ಉಳಿದಂತೆ ಗಣಕವಿಜ್ಞಾನ, ಭೂವಿಜ್ಞಾನ, ವೈದ್ಯವಿಜ್ಞಾನ ಮತ್ತು ಮಾನವಶಾಸ್ತ್ರಕ್ಕೆ ಸಂಬಂಧಿಸಿದಂತೆ ವಿಶ್ವಕೋಶಗಳ ಕಾರ್ಯವು ಪ್ರಗತಿಯಲ್ಲಿದೆ. 
 
ಎಪಿಗ್ರಾಫಿಯಾ ಕರ್ನಾಟಿಕಕರ್ನಾಟಕ ಸರ್ಕಾರದ ಉದಾರ ಧನಸಹಾಯದಿಂದ ಈ ಬಹೃತ್ ಯೋಜನೆ 1970ರಲ್ಲಿ ನಮ್ಮ ಸಂಸ್ಥೆಯಿಂದ ಪ್ರಾರಂಭವಾಯಿತು. ಇದುವರೆವಿಗೂ ಕರ್ನಾಟಕದ ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಒಟ್ಟು 27 ಸಂಪುಟಗಳು ಪ್ರಕಟವಾಗಿವೆ. ಪ್ರತಿ ಸಂಪುಟ ಸುಮಾರು 1,000 ಪುಟಗಳ ವಿಸ್ತಾರವನ್ನು ಹೊಂದಿದ್ದು, ಸಂಶೋಧಕರಿಗೆ ಮಹತ್ವದ ಆಕರಗಳಾಗಿವೆ. ಉಳಿದ 12 ಸಂಪುಟಗಳ ಕಾರ್ಯ ಪ್ರಗತಿಯಲ್ಲಿದೆ.
 
ಹಸ್ತಪ್ರತಿ ಸಂರಕ್ಷಣೆ, ಸಂಪಾದನೆ ಮತ್ತು ಪ್ರಕಟಣೆ

1966 ಕೊನೆಯಲ್ಲಿ ಅಸ್ತಿತ್ವಕ್ಕೆ ಬಂದ ಹಸ್ತಪ್ರತಿ ಭಂಡಾರದಲ್ಲಿ ಓಲೆ ಮತ್ತು ಕಾಗದದ ಹಸ್ತಪ್ರತಿಗಳು ಸೇರಿದಂತೆ ಒಟ್ಟು 8,000ಕ್ಕೂ ಅಧಿಕ ಹಸ್ತಪ್ರತಿಗಳ ಸಂಗ್ರಹವಿದೆ. ಇದನ್ನು ಎಚ್ಚರಿಕೆಯಿಂದ ಸಂರಕ್ಷಿಸಿ ಕೊಂಡು ಬರಲಾಗುತ್ತಿದೆ. ಕ್ರಿ.ಶ. 1342ರಲ್ಲಿ ಪ್ರತಿ ಮಾಡಲಾಗಿರುವ ರನ್ನನ ಗದಾಯುದ್ಧ ಇಲ್ಲಿರುವ ಅತ್ಯಂತ ಪ್ರಾಚೀನ ಹಸ್ತಪ್ರತಿಯಾಗಿದೆ. 1850ರಲ್ಲಿ ಪ್ರತಿ ಮಾಡಲ್ಪಟಿರುವ ಪ್ರಭಾವತಿ ಪರಿಣಯ ಕಾಲಮಾನದ ದೃಷ್ಟಿಯಿಂದ ಇತ್ತೀಚಿನ ಓಲೆಯ ಹಸ್ತಪ್ರತಿಯಾಗಿದೆ. ಈವರೆಗೆ ಹಸ್ತಪ್ರತಿ ಭಂಡಾರದಲ್ಲಿರುವ ಹಸ್ತಪ್ರತಿಗಳ ಪೈಕಿ 160 ಹಸ್ತಪ್ರತಿಗಳನ್ನು ವೈಜ್ಞಾನಿಕವಾಗಿ ಸಂಪಾದಿಸಿ, ಪರಿಷ್ಕರಿಸಿ ಪ್ರಕಟಿಸಲಾಗಿದೆ.
 
ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ
ಇದು ಕನ್ನಡ ಅಧ್ಯಯನ ಸಂಸ್ಥೆಯ ಮತ್ತೊಂದು ಪ್ರತಿಷ್ಠಿತ ಯೋಜನೆಯಾಗಿದ್ದು, ಇದರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಾಪಕರು ಹಾಗೂ ಸಂಶೋಧಕರು ಮುಖ್ಯವಾಗಿ ಲೇಖನದಾರರಾಗಿರುತ್ತಾರೆ. ಸಂಶೋಧನಾತ್ಮಕ ಮತ್ತು ವಿಮರ್ಶಾತ್ಮಕ ಗುಣಗಳಿಗೆ ನಿಷ್ಠವಾಗಿ ಹತ್ತು ಸಂಪುಟಗಳಲ್ಲಿ ಈ ಯೋಜನೆ ಹರಡಿಕೊಂಡಿದೆ. 1974ರಲ್ಲಿ ಮೊದಲ ಸಂಪುಟ ಪ್ರಕಟವಾಗಿದ್ದು ಈವರೆಗೆ 5 ಸಂಪುಟಗಳು ಪ್ರಕಟವಾಗಿವೆ. ಇದರಲ್ಲಿ 4ನೆಯ ಸಂಪುಟ 2 ಭಾಗಗಳನ್ನು 5ನೇ ಸಂಪುಟ 4 ಭಾಗಗಳನ್ನು ಹೊಂದಿದೆ. ಉಳಿದ ಸಂಪುಟಗಳ ಸಂಪಾದನಾ ಕಾರ್ಯ ಪ್ರಗತಿಯಲ್ಲಿದೆ.
 
ಹರಿದಾಸ ಸಾಹಿತ್ಯ
1968 ಜುಲೈನಲ್ಲಿ ಈ ಯೋಜನೆ ಪ್ರಾರಂಭವಾಯಿತು. ಯೋಜನೆಯ ಅಂಗವಾಗಿ ಕರ್ನಾಟಕದಾದ್ಯಂತ ಸಂಚರಿಸಿ ಹರಿದಾಸ ಸಾಹಿತ್ಯಕ್ಕೆ ಸಂಬಂಧಿಸಿದಂತೆ 310 ಓಲೆ ಹಾಗೂ ಕಾಗದದ ಪ್ರತಿಗಳನ್ನು ಸಂಗ್ರಹಿಸಲಾಯಿತು. ಈವರೆಗೆ ಈ ಯೋಜನೆಯಲ್ಲಿ 25 ಪ್ರಮುಖ ಗ್ರಂಥಗಳು ಪ್ರಕಟವಾಗಿವೆ. ಕನಕದಾಸರ ಕೀರ್ತನೆಗಳು ಅಚ್ಚಿನಲ್ಲಿದೆ.
 
ಭಾಷಾಂತರ ಮತ್ತು ಪಠ್ಯಪುಸ್ತಕ
1966-67ರಲ್ಲಿ ಕೇಂದ್ರ ಸರ್ಕಾರದ ಮಂಜೂರು ಮಾಡಿದ ಧನಸಹಾಯದಿಂದ ಈ ಯೋಜನೆ ಪ್ರಾರಂಭವಾಯಿತು. ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣಗಳಿಗೆ ಸಂಬಂಧಿಸಿದ ಪಠ್ಯಪುಸ್ತಕಗಳನ್ನು ಪರಾಮರ್ಶನ ಗ್ರಂಥಗಳನ್ನು ಕನ್ನಡದಲ್ಲಿ ಪ್ರಕಟಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ಇದುವರೆಗೆ ಈ ಯೋಜನೆ ಅಡಿಯಲ್ಲಿ 232 ಪುಸ್ತಕಗಳನ್ನು ಪ್ರಕಟಿಸಲಾಗಿದೆ. ರಾಷ್ಟ್ರಮಟ್ಟದ ಘನವಿದ್ವಾಂಸರಾದ ಪಿ. ವಿ. ಕಾಣೆ ಅವರ ಧರ್ಮಶಾಸ್ತ್ರದ ಇತಿಹಾಸವನ್ನು ಹಲವು ಸಂಪುಟಗಳಾಗಿ ಮತ್ತು ಪ್ರತಿಷ್ಠಿತ ಭಂಡಾರ್‍ಕರ್ ಪ್ರಾಚ್ಯ ಸಂಶೋಧನಾ ಸಂಸ್ಥೆಯ ಮಹಾಭಾರತದ ಸಟೀಕಾ ಆವೃತ್ತಿಗಳನ್ನು ಈ ಯೋಜನೆಯಲ್ಲಿ ಪ್ರಕಟಿಸಲಾಗಿದೆ.
 
ಸಂಸ್ಥೆಯ ವಿಶೇಷ ಆಕರ್ಷಣೆಗಳು
ಜಾನಪದ ವಸ್ತುಸಂಗ್ರಹಾಲಯ
1968ರಲ್ಲಿ ಸ್ಥಾಪಿತವಾದ ಜಾನಪದ ವಸ್ತುಸಂಗ್ರಹಾಲಯ ಡಾ. ದೇ.ಜ.ಗೌ., ಡಾ.ಜೀ.ಶಂ.ಪರಮಶಿವಯ್ಯ., ಡಾ. ಪಿ. ಆರ್. ತಿಪ್ಪೇಸ್ವಾಮಿ ಅವರ ನಿಷ್ಠೆ ಮತ್ತು ಪರಿಶ್ರಮದಿಂದ ಹಂತ ಹಂತವಾಗಿ ಬೆಳೆಯುತ್ತಾ ಬಂದಿದ್ದು, ಇಂದು ಸುಮಾರು ಇಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ಸಂಗ್ರಹಿಸಿದ ಸುಮಾರು 6,719 ಅಮೂಲ್ಯ ವಸ್ತುಗಳ ಬೃಹತ್ ಸಂಗ್ರಹವಿದ್ದು, ಇಡೀ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದಾದ ಎರಡನೆಯ ವಸ್ತುಸಂಗ್ರಹಾಲಯವೆಂದು ಪ್ರಸಿದ್ಧಿ ಪಡೆದಿದೆ.
ಭಾಷಾಪ್ರಯೋಗಾಯ ಹಾಗೂ ಬಹುಮಾಧ್ಯಮ ಪ್ರಯೋಗಾಲಯ
 

ಭಾಷಾಪ್ರಯೋಗಾಲಯ ಹಾಗೂ ಬಹುಮಾಧ್ಯಮ ಪ್ರಯೋಗಾಲಯ ಸಂಸ್ಥೆಯಲ್ಲಿದ್ದು ಕನ್ನಡೇತರ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಸಲಾಗುತ್ತದೆ. ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಂಶೋಧನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಸ್ತುತ 10 ಕಂಪ್ಯೂಟರ್‍ಗಳು ಬಳಸುತ್ತಿದ್ದು, 30 ಕಂಪ್ಯೂಟರ್‍ಗಳು ಅಳವಡಿಸುವಷ್ಟು ಸ್ಥಳಾವಕಾಶವಿದೆ.
 
 ಗ್ರಂಥಾಲಯ
ಸಂಸ್ಥೆಯೊಂದಿಗೇ ಪ್ರಾರಂಭವಾದ ಗ್ರಂಥಾಲಯದಲ್ಲಿ ಇಂದು 34,661 ಅಮೂಲ್ಯ ಗ್ರಂಥಗಳಿವೆ. ಈ ಸಂಗ್ರಹದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಗ್ರಂಥಗಳು, ವಿಶ್ವಕೋಶಗಳು, ನಿಘಂಟುಗಳು ಇದ್ದು, ಸಂಸ್ಕøತ, ಕನ್ನಡ, ಇಂಗ್ಲಿಷ್, ಮರಾಠಿ, ತಮಿಳು, ತೆಲುಗು ಭಾಷೆಯ ಗ್ರಂಥಗಳು ಸೇರಿಕೊಂಡಿವೆ. ಹಲವು ಹಿರಿಯ ಸಾಹಿತಿಗಳು ದಾನ ರೂಪದಲ್ಲಿ ಕೊಟ್ಟ ಗ್ರಂಥಗಳ ಸಂಗ್ರಹವೂ ಇಲ್ಲಿದೆ.
 

 
ಹಾ ಮಾ ನಾ ದತ್ತಿ ಬಹುಮಾನ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ವಿಜಯಾ ದಬ್ಬೆಯವರು 2001ರಲ್ಲಿ ತಮ್ಮ ವಿದ್ಯಾಗುರುಗಳಾದ ಹಾ ಮಾ ನಾಯಕ ಅವರ ಹೆಸರಿನಲ್ಲಿ 75 ಸಾವಿರ ರೂಗಳ ದತ್ತಿಯನ್ನು ಪ್ರತಿಷ್ಠಾಪಿಸಿದರು. ಈ ದತ್ತಿ ಹಣದ ಬಡ್ಡಿಯಿಂದ ಬಂದ ಹಣದಲ್ಲಿ ಕನ್ನಡ, ಭಾಷಾವಿಜ್ಞಾನ, ಜಾನಪದ, ದಕ್ಷಿಣ ಭಾರತೀಯ ಅಧ್ಯಯನ ವಿಭಾಗದಲ್ಲಿ ಹೆಚ್ಚಿನ ಅಂಕ ಗಳಿಸಿದ ನಾಲ್ವರು ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಉದ್ದೇಶವನ್ನೊಳಗೊಂಡಿದೆ.
 
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಧನ ಸಹಾಯ ಹೊಂದಿದ ಶಾಸ್ತ್ರೀಯ ಭಾಷಾ ಕ್ರಿಯಾ ಯೋಜನೆಗಳು
• ಕನ್ನಡ ಕ್ರಿಯಾ ಯೋಜನೆ - 1 ಕರ್ನಾಟಕ ಅರಸು ಮನೆತನಗಳ ಶಾಸನ ಸಂಪುಟಗಳು(ಪೂರ್ಣಗೊಂಡಿದೆ)• ಕನ್ನಡ ಕ್ರಿಯಾ ಯೋಜನೆ - 2 ಪ್ರಾಚೀನ ಕನ್ನಡ ಹಸ್ತಪ್ರತಿಗಳ ಸಂರಕ್ಷಣೆ, ದಾಖಲೀಕರಣ, ಪ್ರಕಟಣೆ ಮತ್ತು ಗಣಕೀಕರಣ(ಮುಂದುವರೆಯುತ್ತಿದೆ)• ಕನ್ನಡ ಕ್ರಿಯಾ ಯೋಜನೆ - 3 ಕನ್ನಡ ವಿಶ್ವಕೋಶಗಳಲ್ಲಿ ಪ್ರಕಟವಾದ ಲೇಖನಗಳ ವಿಷಯವಾರು ಗ್ರಂಥಗಳ ಪ್ರಕಟಣೆ (ಪೂರ್ಣಗೊಂಡಿದೆ)• ಕನ್ನಡ ಕ್ರಿಯಾ ಯೋಜನೆ - 4 ಕನ್ನಡ ವಿಷಯ ವಿಶ್ವಕೋಶ ಕರ್ನಾಟಕ ಸಂಪುಟದ ಅನುವಾದ ಕ್ರಿಯಾಯೋಜನೆ(ಮುಂದುವರೆಯುತ್ತಿದೆ)• ಕನ್ನಡ ಕ್ರಿಯಾ ಯೋಜನೆ - 5 ಸಾಹಿತ್ಯ ಚಿಂತನೆಗಳ ಪಾರಿಭಾಷಿಕ ಪದವಿವರಣ ಕೋಶ• ಕನ್ನಡ ಕ್ರಿಯಾ ಯೋಜನೆ - 6 ಕನ್ನಡದಲ್ಲಿ ಅನ್ಯಭಾಷಾ ಪದನಿಷ್ಪತ್ತಿ ಕೋಶ(ಪೂರ್ಣಗೊಂಡಿದೆ)• ಕನ್ನಡ ಕ್ರಿಯಾ ಯೋಜನೆ - 7 ಹೊನ್ನ ಕೋಗಿಲೆ (ಪೂರ್ಣಗೊಂಡಿದೆ)
 
ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದ ಸಹಾಯದೊಂದಿಗೆ ಪ್ರಾರಂಭಿಸಲಾಗಿರುವ ಎಸ್‍ಎಪಿ ಯೋಜನೆ :
1) ಕನ್ನಡ ಜಾನಪದ ಅಧ್ಯಯನ ಇತಿಹಾಸ  2) ಆಧುನಿಕ ಕನ್ನಡ ವಿಮರ್ಶೆಯ ಇತಿಹಾಸ ಧನ ಸಹಾಯದ ಮೊತ್ತ ರೂ. 28,00,000ಪ್ರೊ. ಕೆ. ಎನ್. ಗಂಗಾನಾಯಕ್, ಸಂಯೋಜಕರು ಶ್ರೀ ರಾಜಣ್ಣ ಸಂಶೋಧನ ಸಹಾಯಕರು
ಡಿ.ಐ.ಟಿ. ಮೇಜರ್ ರಿಸರ್ಚ್ ಪ್ರಾಜೆಕ್ಟ್ ವಿಷಯ : “ಡೆವಲಪ್‍ಮೆಂಟ್ ಆಫ್ ದ್ರವಿಡಿಯನ್ ವರ್ಡ್‍ನೆಟ್ : ಅ್ಯನ್ ಇಂಟಿಗ್ರೇಟೆಡ್             ವರ್ಡ್‍ನೆಟ್ ಫಾರ್ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ (ಎಕ್ಸ್‍ಕ್ಲೂಸಿವ್ ವರ್ಡ್‍ನೆಟ್ ಫಾರ್ ಕನ್ನಡ)’’.
ಧನ ಸಹಾಯದ ಮೊತ್ತ ರೂ. 33,00,000ಪ್ರಿನ್ಸಿಪಲ್ ಇನ್‍ವೆಸ್ಟಿಗೇಟರ್ : ಪ್ರೊ. ಹೇಮಂತಕುಮಾರ್(ಪ್ರಭಾರ)ಹಿರಿಯ ಭಾಷಾವಿಜ್ಞಾನಿ : ಡಾ. ಬಿ. ಪಿ. ಹೇಮಾನಂದ ನಿಘಂಟು ರಚನಾಕಾರರು : ಶ್ರೀಮತಿ ಆರ್. ಎಂ. ರಮ್ಯ
ನಿಘಂಟು ರಚನಾಕಾರರು : ಶ್ರೀಮತಿ ಛಾಯಾದೇವಿ
 
 
ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದ ಸಹಾಯ ಹೊಂದಿದ ಮೇಜರ್ ರಿಸರ್ಚ್ ಪ್ರಾಜೆಕ್ಟ್
1. ವಿಷಯ: ಮಂಟೆಸ್ವಾಮಿ ಕಾವ್ಯದ ಬಹುಮುಖಿ ದಾಖಲೀಕರಣ (ಪೂರ್ಣಗೊಂಡಿದೆ) ಯುಜಿಸಿ : 12 ಲಕ್ಷ 2006 – 2009 ಪ್ರಿನ್ಸಿಪಲ್ ಇನ್‍ವೆಸ್ಟಿಗೇಟರ್ : ಡಾ. ಅಂಬಳಿಕೆ ಹಿರಿಯಣ್ಣ ಪ್ರೊಜೆಕ್ಟ್ ಫೆಲೋ : ಡಾ. ಪಿ. ಮಣಿ
 
2. ವಿಷಯ : ಇಂಡಿಜಿನಿಯಸ್ ನಾಲೆಡ್ಜ್ ಆಫ್ ಓರಲ್ ಟ್ರಡಿಷನ್ ಆಫ್ ಷೆಡ್ಯೂಲ್ಡ್ ಕಾಸ್ಟ್ ಅಂಡ್ ಷೆಡ್ಯೂಲ್ಡ್ ಟ್ರೈಬ್ ವಿಮೆನ್ : ರೆಪ್ರಸೆಂಟಿಟಿವ್ ಮಾಡೆಲ್ಸ್ (ಆ¥sóï ಹಾಸನ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಡಿಸ್ಟ್ರಿಕ್ಟ್, ಕರ್ನಾಟಕ) ಧನ ಸಹಾಯದ ಮೊತ್ತ ರೂ. 4,57,000ಪ್ರಿನ್ಸಿಪಲ್ ಇನ್‍ವೆಸ್ಟಿಗೇಟರ್ : ಡಾ. ಎನ್. ಕೆ. ಲೋಲಾಕ್ಷಿ
 
ಸಂಸ್ಥೆಯಲ್ಲಿರುವ ಪೀಠಗಳು :
1. ಕುವೆಂಪು ಕಾವ್ಯಾಧ್ಯಯನ ಪೀಠ : ಇಲ್ಲಿಯವರೆಗಿನ ಸಂದರ್ಶಕ ಪ್ರಾಧ್ಯಾಪಕರುಪ್ರೊ. ಪ್ರಭುಶಂಕರ, ಪ್ರೊ. ಎಚ್. ತಿಪ್ಪೇರುದ್ರಸ್ವಾಮಿ ಪ್ರೊ. ಜಿ. ಎಸ್. ಶಿವರುದ್ರಪ್ಪ, ಪ್ರೊ. ಎಸ್.ಎಂ. ವೃಷಬೇಂದ್ರಸ್ವಾಮಿ, ಪ್ರೊ. ಜಿ. ಎಚ್. ನಾಯಕ್, ಪ್ರೊ. ಸಿ. ಪಿ. ಕೃಷ್ಣಕುಮಾರ್, ಪ್ರೊ. ಎಚ್. ಜೆ. ಲಕ್ಕಪ್ಪಗೌಡ, ಪ್ರೊ. ಪ್ರಧಾನ ಗುರುದತ್ತ,ಪ್ರೊ. ಕೆ. ಮರುಳಸಿದ್ದಪ್ಪ, ಪ್ರೊ. ರಾಮೇಗೌಡ, ಪ್ರೊ. ಕೆ. ಎಸ್. ಭಗವಾನ್, ಪ್ರೊ. ಡಿ.ಕೆ. ರಾಜೇಂದ್ರ.
 
2. ನಾಲ್ವಡಿ ಕೃಷ್ಣರಾಜ ಒಡೆಯರ್ ಪೀಠ (ವಿಶ್ವವಿದ್ಯಾನಿಲಯದ ಆವರ್ತನ ಪೀಠ) ಸಂದರ್ಶಕ ಪ್ರಾಧ್ಯಾಪಕರು : ಪ್ರೊ. ಪಿ. ವಿ. ನಂಜರಾಜೇ ಅರಸ್
 
3. ಶ್ರೀ ಬಸವೇಶ್ವರ ಸಾಮಾಜಿಕ ಪರಿವರ್ತನ : ಸಂಶೋಧನ ಮತ್ತು ವಿಸ್ತರಣ ಕೇಂದ್ರ ಸಂದರ್ಶಕ ಪ್ರಾಧ್ಯಾಪಕರು : ಪ್ರೊ. ಮಲೆಯೂರು ಗುರುಸ್ವಾಮಿ : ಪ್ರೊ. ಬರಗೂರು ರಾಮಚಂದ್ರಪ್ಪ