ಮಾನವಶಾಸ್ತ್ರವು ಮನುಕುಲ ಮತ್ತುಅದರ ವಿಕಾಸವನ್ನು ಅಧ್ಯಯನ ಮಾಡುತ್ತದೆ.ಮಾನವಜೀವನದ ಪ್ರಾಚೀನ, ಸಮಕಾಲೀನ ಮತ್ತು ಭವಿಷ್ಯದ ಚಟುವಟಿಕೆಗಳನ್ನು ಹಾಗೂ ಅದರ ಆಗು-ಹೋಗುಗಳನ್ನು ಕುರಿತುಚರ್ಚಿಸುತ್ತದೆ.ಇದು ಮಾನವನಜೈವಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಘಟಕಗಳ ವೈವಿಧ್ಯ ಮತ್ತು ಸಾಮ್ಯತೆಗಳನ್ನು ಸ್ಥೂಲವಾಗಿ ವಿವರಿಸುತ್ತದೆ.ಬದಲಾಗುತ್ತಿರುವ ಸಾಮಾಜಿಕ, ಜೈವಿಕ, ಜನಸಂಖ್ಯಾ, ರಾಜಕೀಯ, ಶೈಕ್ಷಣಿಕ ಮತ್ತುಆರ್ಥಿಕ ವಿಷಗಳಿಗನುಗುಣವಾಗಿ ಮಾನವಶಾಸ್ತ್ರ ವಿಷಯವು ಸಹಾ ಅದರ ಪ್ರಸ್ತುತತೆಯನ್ನು ಅಳವಡಿಸಿಕೊಳ್ಳುತ್ತಾ ಬಂದಿದೆ.

ಮಾನವಶಾಸ್ತ್ರ ಅಧ್ಯಯನ ವಿಭಾಗವನ್ನು ಸ್ನಾತ್ತಕೋತ್ತರ ಮತ್ತು ಸಂಶೋಧನಾತರಬೇತಿಯನ್ನು ನೀಡುವ ಸಲುವಾಗಿ ಹಾಗೂ ಮಾನವಶಾಸ್ತ್ರೀಯ ಸಂಶೋಧನೆಯನ್ನು ವಿವಿಧಕ್ಷೇತ್ರದಲ್ಲಿ ವಿಸ್ತರಿಸಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ೧೯೭೩ರಲ್ಲಿ ಸ್ಥಾಪಿಸಲಾಯಿತು.ಮಾನವಶಾಸ್ತ್ರ ವಿಭಾಗವು ಮೈಸೂರು ವಿಶ್ವವಿದ್ಯಾನಿಯಲದಕೇಂದ್ರ ಬಿಂದುವಾಗಿದ್ದು, ಪ್ರಮುಖ ಅಧ್ಯಯನ ವಿಷಯವಾಗಿಕಾರ್ಯನಿರ್ವಹಿಸುತ್ತಿದೆ.ಇದೊಂದು ವಿವಿಧ ದೃಷ್ಟೀಕೋನವುಳ್ಳ, ವಿವಿಧ ಸಂಸ್ಕೃತಿಯ ಸಮಸ್ಯೆ ಮತ್ತು ಸವಾಲುಗಳನ್ನು, ಹಾಗೂ ಸಮಕಾಲೀನ ವಿಷಯಗಳನ್ನು ವಿಮರ್ಶಿಸಿ ನಿರ್ಣಯಿಸುತ್ತದೆ.

ಈ ವಿಭಾಗವುಜೆಎಸ್‌ಎಸ್ ವೈದ್ಯಕೀಯಕಾಲೇಜು, ಮೈಸೂರು, ಕರ್ನಾಟಕರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು, ಮಾನವಶಾಸ್ತ್ರ ಸರ್ವೇಕ್ಷಣ ಇಲಾಖೆ, ಮತ್ತುಇಂದಿರಾಗಾAಧಿರಾಷ್ಟ್ರೀಯ ಮಾನವ ಸಂಗ್ರಹಾಲಯ ಮುಂತಾದ ಸಂಸ್ಥೆಗಳ ಸಹಯೋಗದೊಂದಿಗೆ ಸಂಸ್ಕೃತಿ, ಸಮಾಜ, ಕಲೆ, ವಿವಿಧ ಸಮಾಜಗಳ ಉಗಮ ಮುಂತಾದ ವಿಷಯಗಳಿಗೆ ಸಂಬAಧಿಸಿದAತೆ ಕಾರ್ಯನಿರ್ವಹಿಸುತ್ತಿದೆ.

ಅಧ್ಯಯನ ವಿಷಯಗಳು

ಇದು ಜಾಗತೀಕರಣ, ಲಿಂಗ ಅಧ್ಯಯನಗಳು, ಬುಡಕಟ್ಟು ಸಮಸ್ಯೆಗಳು, ಅಭಿವೃದ್ಧಿ ಮಾನವಶಾಸ್ತ್ರ, ಜನಸಂಖ್ಯಾಶಾಸ್ತ್ರ, ವೈದ್ಯಕೀಯ ಮಾನವಶಾಸ್ತ್ರ, ಸಾಂಸ್ಕೃತಿಕ ಭಿನ್ನತೆಗಳನ್ನು, ದೃಶ್ಯ ಮಾನವಶಾಸ್ತ್ರ, ದಂತ ಮಾನವ ವಿಜ್ಞಾನ, ಸಾರ್ವಜನಿಕ ನೀತಿ ವಿಮರ್ಶಾತ್ಮಕ ಸಿದ್ಧಾಂತಗಳು, ಪೌಷ್ಠಿಕ ಮಾನವಶಾಸ್ತ್ರ, ಜನಾಂಗೀಯ ಅಧ್ಯಯನ, ಬುಡಕಟ್ಟು ಆರೋಗ್ಯ, ಸ್ಥಳೀಯ ಅನುಭವ ಇತ್ಯಾದಿ ವಿಷಯಗಳನ್ನು ಕುರಿತು ಅಧ್ಯಯನ ಮಾಡುತ್ತದೆ. 

ಫೆಲೋಶಿಪ್ / ಪದಕಗಳು

1.ಚಿನ್ನದ ಪದಕ: ಸುಧಾಮೂರ್ತಿ ಚಿನ್ನದ ಪದಕ

2.ನಗದು ಪ್ರಶಸ್ತಿ:   ಪ್ರೊ ವೆಂಕಟರಾಯಪ್ಪ ನಗದು ಪ್ರಶಸ್ತಿ

ಸಂಶೋಧನಾ ಚಟುವಟಿಕೆಗಳು

ವಿಭಾಗದ ಸಿಬ್ಬಂಧಿವರ್ಗವು ಸಂಶೋಧನಾ (ಪಿಹೆಚ್.ಡಿ) ಮತ್ತು ಸಂಶೋಧನೋತ್ತರ (ಪಿಡಿಎಫ್) ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ ನೀಡುವಲ್ಲಿ ಸಕ್ರೀಯವಾಗಿದೆ. ಹಾಗೂ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ, ಬುಡಕಟ್ಟು ಸಂಶೋಧನಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ, Iಅಒಖ, IಅSSಖ, ಒಊಖಆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಬುಡಕಟ್ಟು ಮಂತ್ರಾಲಯ ಮತ್ತೀತರ ರಾಜ್ಯ ಮತ್ತು ಕೇಂದ್ರ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. 

ಸೌಲಭ್ಯಗಳು: 

1.ವಿಭಾಗವು ಉತ್ತಮ ಪರಾಮರ್ಶನ ಗ್ರಂಥಗಳ್ನು ಹಿಂದಿನ ಹಾಗು ಹಾಲಿ ವಿಭಾಗದ ಅಧ್ಯಕ್ಷರು ಮತ್ತು ಪ್ರಾದ್ಯಾಪಕರಿಂದ ಸಂಗ್ರಹ ಮಾಡಿಲಾಗಿದೆ ಹಾಗೂ ಇವುಗಳನ್ನು ವಿಭಾಗದ ಗ್ರಂಥಾಲಯದಲ್ಲಿ ಸಂಗ್ರಹಿಸಲಾಗಿದ್ದು, ಸಂಶೋಧನಾ  ಮತ್ತು ಸ್ನಾತ್ತೋತ್ತರ ವಿದ್ಯಾರ್ಥಿಗಳ ಬಳಕೆಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. 

2.ವಿಭಾಗವು ಉತ್ತಮವಾದ ಪ್ರಯೋಗಾಲಯವನ್ನು ಹೊಂದಿದ್ದು, ವಿವಿಧ ಉಪಯುಕ್ತ ಬೋಧನೋಪಕರಣಗಳನ್ನು ಹೊಂದಿದೆ.

3.ವಿದ್ಯಾರ್ಥಿಗಳ ಬಳಕೆಗಾಗಿ ಗಣಕ ಯಂತ್ರಗಳು ಕೂಡ ಇದ್ದು, ಇದಕ್ಕಾಗಿ ಅಂತರ್ಜಾಲ ಸಂಪರ್ಕವನ್ನು ಕಲ್ಪಿಸಲಾಗಿದೆ.

4.ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯವನ್ನು ಸಾಧಿಸುವ ಸಲುವಾಗಿ ವಿಭಾಗದಲ್ಲಿ ಸಭೆಗಳನ್ನು ಏರ್ಪಡಿಸಲಾಗುತ್ತದೆ. ಜೊತೆಗೆ ಗುಂಪು ಸಂದರ್ಶನ ಮತ್ತು ಸಮ್ಮೇಳನಗಳನ್ನು ಕೂಡ ನಡೆಸಲಾಗುತ್ತದೆ.

5. ಕ್ಷೇತ್ರಕಾರ್ಯ, ಸಂಶೋಧನಾ ಅಧ್ಯಯನಗಳು ಹಾಗೂ ಶೈಕ್ಷಣಿಕ ಬೆಳವಣಿಗೆಗಳಿಗೆ ನುರಿತ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮಾಡಲಾಗುತ್ತದೆ. 

ಮಾನವಶಾಸ್ತ್ರದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು

1.ನಾಗರಿಕ ಸೇವೆಗಳು & ಸ್ಪರ್ಧಾತ್ಮಕ ಪರೀಕ್ಷೆಗಳು, ವಿಧಿ  ವಿಜ್ಞಾನ ಇಲಾಖೆಗಳು, ಗ್ರಾಮೀಣಾಭಿವೃದ್ಧಿ ಇಲಾಖೆಗಳು, ಮಕ್ಕಳ ಅಭಿವೃದ್ಧಿ ಇಲಾಖೆ, ಎಎಸ್ಐ, IಉಖಒS, ವಿದೇಶಾಂಗ ವ್ಯವಹಾರಗಳ ಸಚಿವಾಲಯ,  ಬುಡಕಟ್ಟು ಅಭಿವೃದ್ಧಿ ಇಲಾಖೆ, ಸಾಮಾಜಿಕ ನ್ಯಾಯ, ಬುಡಕಟ್ಟು ಕೇಂದ್ರೀಯ ಭಾರತೀಯ ಭಾಷೆಗಳ (ಅIIಐ), ಬುಡಕಟ್ಟು ಸಂಶೋಧನಾ ಸಂಸ್ಥೆಗಳು,  ಜನಸಂಖ್ಯೆಯ ಸಂಶೋಧನಾ ಸಂಸ್ಥೆಗಳು,  IಅSSಖ ಮುಂತಾದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಹಾಗೂ ವಿವಿಧ ವಿಶ್ವ ವಿದ್ಯಾಲಯಗಳಲ್ಲಿ ಬೋಧನಾ ಮತ್ತು ಬೋಧಕೇತರ ಹಾಗೂ ಸಂಶೋಧನಾ ಉದ್ಯೋಗ ಅವಕಾಶಗಳು ವಿಪುಲವಾಗಿದೆ.

2.ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್‍ಎಸ್‍ಎಸ್‍ಒ), ಜನಗಣತಿ ಇಲಾಖೆಗಳಲ್ಲಿ ಸಂಶೋಧನಾ ಸಹಾಯಕ, ಸಹ ಸಂಶೋಧಕ ಉದ್ಯೋಗವಕಾಶಗಳು ಲಭ್ಯವಿರುತ್ತದೆ. 

ಸಂಶೋಧನೆ/ವಿಚಾರ ಸಂಕಿರಣ/ಸಮ್ಮೇಳಗಳು/ಕಾರ್ಯಗಾರಗಳು/ಇತರೆ

ವಿದ್ಯಾರ್ಥಿಗಳ ಕೌಶಲ್ಯ ಮತ್ತು ಶೈಕ್ಷಣಿಕ ಜ್ಞಾನವನ್ನು ಹೆಚ್ಚಿಸುವ ಸಲುವಾಗಿ  ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಸಂಶೋಧನಾ ತಜ್ಞರು, ಸಂಪನ್ಮೂಲ ವ್ಯಕ್ತಿಗಳ ಮೂಲಕ ವಿವಿಧ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಸಮ್ಮೇಳಗಳು, ಕಾರ್ಯಗಾರಗಳು ಹಾಗೂ ಉಪನ್ಯಾಸಗಳನ್ನು ಕಾಲದಿಂದ ಕಾಲಕ್ಕೆ ಏರ್ಪಡಿಸಲಾಗುತ್ತದೆ. 

ಸಂಶೋಧನಾ ಯೋಜನೆಗಳು

ಡಾ. ಎಂ.ಆರ್. ಗಂಗಾಧರ್

1.ಕರ್ನಾಟಕದ  ಕುಣಬಿ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ, ಕರ್ನಾಟಕ ಸರ್ಕಾರ.

2.ಕರ್ನಾಟಕದ  ಕುಂಚುಟಿಗ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ, ಕರ್ನಾಟಕ ಸರ್ಕಾರ.

3.ಆನ್ ಎವಲ್ಯೂಷನ್ ಸ್ಟಡಿ ಆಫ್ ಭೂ-ಒಡೆತನ ಯೋಜನೆ ಫಾರ್ ಲ್ಯಾಂಡ್ಲೆಸ್ ಶೆಡ್ಯೂಲ್ಡ್ ಕ್ಯಾಸ್ಟ್ ಇನ್  ಕರ್ನಾಟಕ,  ಡಾ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಸರ್ಕಾರ.

4.ಬಯೋ-ಆಂಥ್ರೋಫಾಲಿಜಿಕಲ್, ಬಯೋ ಕೆಮಿಕಲ್ ಅಂಡ್ ಬಯೋ ಎಥಿಕಲ್ ಸ್ಟಡಿ ಅಮಾಂಗ್ ಟ್ರೈಬಲ್ ಪಾಪುಲೇಷನ್ ಆಫ್ ವೆಸ್ಟರ್ನ್ ಘಾಟ್ಸ್, ಸೆಂಟರ್ ಆಫ್ ಎಕ್ಸಲೆನ್ಸಿ, ಸೆಂಟರ್ ಫಾರ್ ಎಕ್ಸ್ಲೆನ್ಸಿ ಇನ್ ಬಯೋ ಡೈವರ್ಸಿಟಿ, ಬಯೋಪ್ರೋಸ್ಪಾಕ್ಟಿಂಗ್ ಅಂಡ್ ಸಸ್ಟೆನ್ಸಿಬಲ್ ಡೆವೆಲಪ್ಮೆಂಟ್, ಯುನಿವರ್ಸಿಟಿ ಆಫ್ ಮೈಸೂರು. 

5.ದ ಸ್ಟಡಿ ಆಫ್ ಪೋಕ್ ಅಂಡ್ ಇಂಡಿಜಿನಸ್ ಕ್ವಾನಾಲ್ಡ್ಜ್ ಆಫ್ ಧ ಟ್ರೈಬ್ಸ್ ಆಫ್ ವೆಸ್ಟರ್ನ್ ಘಾಟ್ಸ್ ಮೆಡಿಸಿನಲ್ ಪ್ಲಾಂಟ್ಸ್ ಅಂಡ್ ದೇರ್ ಸೋಷಿಯೋ ಎಕನಾಮಿಕ್ ಡಿಫೆಂಡೆನ್ಸಿ ಆನ್ ದ ಫಾರೆಷ್ಟ್ ರಿಸೋರ್ಸಸ್’ ಸೆಂಟರ್ ಆಫ್ ಎಕ್ಸಲೆನ್ಸಿ ಇನ್ ಬಯೋ ಡೈವರ್ರಿಸಿಟಿ, ಯುನಿವರ್ಸಟಿ ಆಫ್ ಮೈಸೂರು.

6.ಎ ಸ್ಟಡಿ ಆನ್ ಟ್ರೈಬಲ್ ಹೆಲ್ತ್- ಜೇನುಕುರುಬ ಇನ್ ಕರ್ನಾಟಕ ವಿಥ್ ಸ್ಪೆಸೆಲ್ ರೆಪೆರೆನ್ಸ್ ಟು ಡಯಬಿಟಿಸ್ ಅಂಡ್ ಐಪರ್‍ಟೆನ್ಸನ್” ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್, ಡೆಲ್ಲಿ.

7.ಎ ಸ್ಟಡಿ ಆನ್ ಹೆಲ್ತ್ ಅಂಡ್ ನ್ಯೂಟ್ರಸನಲ್ ಸ್ಟೆಟಸ್ ಅಮಾಂಗ್ ಟ್ರೈಬಲ್ ಚಿಲ್ಡ್ರನ್ ಇನ್ ಮೈಸೂರು ಡಿಸ್ಟ್ರೀಕ್ಟ್” ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್, ಡೆಲ್ಲಿ.

8.ಆನ್ ಅನಾಲಿಸಿಸ್ ಆಫ್ ದ ಎಫೆಕ್ಟ್ ಆಫ್ ಒಬೆಸಿಟಿ ಆನ್ ಮೆಲ್ ಪರ್ಟಿಲಿಟಿ ರೇಟ್ಸ್ ಇನ್ ಕರ್ನಾಟಕ, ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್, ಡೆಲ್ಲಿ.

ಡಾ.ಎನ್. ನಿಂಗಯ್ಯ: 

1.ದ ಸ್ಟಡಿ ಆಫ್ ಪೋಕ್ ಅಂಡ್ ಇಂಡಿಜಿನಸ್ ಕ್ವಾನಾಲ್ಡ್ಜ್ ಆಫ್ ಧ ಟ್ರೈಬ್ಸ್ ಆಫ್ ವೆಸ್ಟರ್ನ್ ಘಾಟ್ಸ್ ಮೆಡಿಸಿನಲ್ ಪ್ಲಾಂಟ್ಸ್ ಅಂಡ್ ದೇರ್ ಸೋಷಿಯೋ ಎಕನಾಮಿಕ್ ಡಿಫೆಂಡೆನ್ಸಿ ಆನ್ ದ ಫಾರೆಷ್ಟ್ ರಿಸೋರ್ಸಸ್’ ಸೆಂಟರ್ ಆಫ್ ಎಕ್ಸಲೆನ್ಸಿ ಇನ್ ಬಯೋ ಡೈವರ್ರಿಸಿಟಿ, ಯುನಿವರ್ಸಟಿ ಆಫ್ ಮೈಸೂರು.

ಡಾ.ಎಚ್,ಕೆ ಭಟ್: 

1.ಪೋಸ್ಟ್ ಮೆಟ್ರಿಕ್ ಸ್ಕಾಲರ್‍ಶಿಫ್ ಫಾರ್ ಎಸ್‍ಸಿ ಸ್ಟೂಡೆಂಟ್ಸ್ ಸ್ಟಡಿಂಗ್ ಪ್ರೋಫೆಸನಲ್ ಕೋರ್ಸಸ್ ಇನ್ ಕರ್ನಾಟಕ: ಆನ್ ಎವಾಲ್ಯೂಷನ್ ಸ್ಟಡಿ” ಡಾ.ಅಂಬೇಡ್ಕರ್ ರೀಸರ್ಚ್ ಇನ್ಸಟಿಟ್ಯೂಟ್, ಬೆಂಗಳೂರು. 

ಡಾ.ಅನ್ನಪೂರ್ಣ ಎಂ.

1.ಆನ್ ಎಥ್ನೋಗ್ರಪಿ ಸ್ಟಡಿ ಆಫ್ ದ ಅಗಸ/ಮಡಿವಾಳಸ್ ಇನ್ ಕರ್ನಾಟಕ” ಸೋಷಿಯಲ್ ವೆಲ್ಪೇರ್ ಡಿಫಾರ್ಟಮೆಂಟ್, ಗವರ್ನಮೆಂಟ್ ಆಫ್ ಕರ್ನಾಟಕ.

2.ದ ಎಥ್ನೋಗ್ರಫಿ ಸ್ಟಡಿ ಆಫ್ ಕಾಡುಗೊಲ್ಲ ಇನ್ ಕರ್ನಾಟಕ, ಸೋಷಿಯಲ್ ವೆಲ್ಪೇರ್ ಡಿಫಾರ್ಟಮೆಂಟ್, ಗವರ್ನಮೆಂಟ್ ಆಫ್ ಕರ್ನಾಟಕ.

 

Location

The department is located at Manasagangotri postgraduate campus of the university. Click on the image below for a detailed map of the campus and the city.


To get the directions to the department scan the following QR code